ಮುಲ್ಕಿ: ಮುಲ್ಕಿ ಸಮೀಪದ ಅತಿಕಾರಿಬೆಟ್ಟು ಗ್ರಾಮದಲ್ಲಿನ ಮಕ್ಕಳ ದೌರ್ಜನ್ಯ ಪ್ರಕರಣ ನಿಷ್ಟಕ್ಷ ತನಿಖೆ ನಡೆಯಬೇಕು.
ಮಾಹಿತಿ ಕೊಡದೆ ಸಂಘಟನೆಗಳ ಹೆಸರನ್ನು ಸೇರಿಸಬಾರದು. ಇದಕ್ಕೆ ನಮ್ಮ ಸಂಘಟನೆಯ ಬೆಂಬಲವಿಲ್ಲ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮಂಗಳೂರು ತಾಲೂಕು ಸಂಚಾಲಕ ಸೂರ್ಯಪ್ರಕಾಶ್ ಹೇಳಿದರು.
ಮುಲ್ಕಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅತಿಕಾರಿಬೆಟ್ಟು ಮಕ್ಕಳ ದೌರ್ಜನ್ಯ ಪ್ರಕರಣ ಮುಚ್ಚಿ ಹಾಕಲು ಯಾವುದೇ ವೇದಿಕೆ ಅಥವಾ ಸಂಘಟನೆ ದುರ್ಬಳಕೆ ಮಾಡುವುದು ಸರಿಯಲ್ಲ.
ಇಲ್ಲಿ ಸತ್ಯ ಪ್ರಮಾಣಕ್ಕೆ ಆಹ್ವಾನ ನೀಡುವ ಬದಲು ಅಂಬೇಡ್ಕರ್ ಅವರ ತತ್ವ ಮೊದಲು ತಿಳಿದುಕೊಳ್ಳಬೇಕು ಯಾವುದೇ ದಲಿತ ಸಮಾಜದವರು ತಪ್ಪು ಮಾಡಿದ್ದರೂ ಸಹ ಅವರ ರಕ್ಷಣೆಗೆ ಮುಂದಾಗಬಾರದು, ಸಂಘಟನೆಗಳನ್ನು ತಪ್ಪು ದಾರಿಗೆ ತಳ್ಳಬೇಡಿ, ಸ್ವಾರ್ಥಕ್ಕಾಗಿ ಬಳಸಿಕೊಳ್ಳಬೇಡಿ ಎಂದರು.
ಕೃಷ್ಣ ಅಮೃತಾನಂದಮಯಿ ನಗರ ಮಾತನಾಡಿ, ಆರೋಪಿ ಪೊಲೀಸ್ ತನಿಖೆ ಮತ್ತು ನ್ಯಾಯಾಲಯದಲ್ಲಿ ತನ್ನ ಮೇಲಿನ ಪ್ರಕರಣ ಪ್ರಶ್ನಿಸಬೇಕೇ ಹೊರತು, ದೇವರ ಹೆಸರಿನಲ್ಲಿ ಪ್ರಮಾಣಕ್ಕೆ ಕರೆಯುವುದು ಸರಿಯಲ್ಲ. ಇದಕ್ಕೆ ಯಾವುದೇ ಸಂಘಟನೆಗಳು ಸಹ ಬೆಂಬಲಿಸಬಾರದು ಎಂದರು.
ಮುಲ್ಕಿ ಹೋಬಳಿ ಸಂಚಾಲಕ ಸದಾಶಿವ ಇಂದಿರಾನಗರ ಮಾತನಾಡಿ, ದಲಿತ ಸಂಘಟನೆ ಮುಖಂಡರು ಎಂದು ಸಂಘಟನೆಗೆ ಮಸಿ ಬಳಿಯುವವರು ಯಾವುದೇ ಕಾರಣಕ್ಕೂ ಕ್ಷಮಾರ್ಹರಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಶಾಂತ್ ನೆಲಗುಡ್ಡೆ, ಜಯ ಕೆರೆಕಾಡು, ಸುಧಾಕರ ಹಳೆಯಂಗಡಿ ಉಪಸ್ಥಿತರಿದ್ದರು.
Kshetra Samachara
15/10/2020 08:18 am