ಮುಲ್ಕಿ: ಅತಿಕಾರಿಬೆಟ್ಟು ಗ್ರಾಪಂ ಸಭಾಭವನದಲ್ಲಿ ಪೋಷಣ್ ಅಭಿಯಾನ ಮತ್ತು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಹೆಣ್ಣು ಮಕ್ಕಳ ಸಾಮೂಹಿಕ ಜನ್ಮದಿನ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅತಿಕಾರಿಬೆಟ್ಟು ಪಿಡಿಒ ರವಿ ಮಾತನಾಡಿ, ಮಕ್ಕಳು ದೇಶದ ಆಸ್ತಿಯಾಗಿದ್ದು ಆರೋಗ್ಯ ಕಾಪಾಡುವುದರ ಜೊತೆಗೆ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಲು ಪೋಷಕರು, ಶಿಕ್ಷಕರು ಪಣತೊಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆರೋಗ್ಯ ಉಪ ಕೇಂದ್ರ ಅತ್ತೂರು-ಕೆಮ್ರಾಲ್ ಆರೋಗ್ಯ ಸಹಾಯಕಿ ನಾಗವೇಣಿ, ಕೋವಿಡ್ ಲ್ಯಾಬ್ ಆಸಿಸ್ಟೆಂಟ್ ಕರುಣಾಕರ, ಮೈಲೋಟ್ಟು,ಸರ್ಕಾರಿ ಕಿ.ಪ್ರಾ. ಶಾಲೆ ಶಿಕ್ಷಕಿ ಹೇಮಲತಾ,ಆಶಾ ಕಾರ್ಯಕರ್ತೆ ಯರಾದ ನಳಿನಿ, ಆಶಾಲತಾ,ಚಂದ್ರಕಲಾ ಶಶಿಕಲಾ, ಅಂಗನವಾಡಿ ಕಾರ್ಯಕರ್ತೆ ನರ್ಮದಾ ಪಂಜಿನಡ್ಕ, ಮಮತಾ, ಮೈಲೊಟ್ಟು, ಅಂಗನವಾಡಿ ಸಹಾಯಕಿ ಶಾಂತಿ ಮೈಲೊಟ್ಟು
ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
Kshetra Samachara
13/10/2020 04:28 pm