ನರಿಂಗಾನ: ಕೊಲ್ಲರಕೋಡಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ನರಿಂಗಾನ ವತಿಯಿಂದ ಮಂಜನಾಡಿ-ನೆತ್ತಿಲಪದವು ಸಂಪರ್ಕ ರಸ್ತೆ ಬದಿ ಬೆಳೆದ ಗಿಡ ಗಂಟಿ ತೆಗೆದು, ಚರಂಡಿ ಸ್ವಚ್ಛಗೊಳಿಸಿ ಹಾಗೂ ರಸ್ತೆ ಬದಿಯ ಗುಂಡಿ ಮುಚ್ಚಿ ಶ್ರಮದಾನ ನಡೆಯಿತು.
ಸುಮಾರು ಒಂದುವರೆ ಕಿ.ಮೀ. ಉದ್ದದ ಈ ರಸ್ತೆಯ ಎರಡೂ ಬದಿ ಬೆಳೆದಿರುವ ಹುಲ್ಲು, ಗಿಡಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತಿತ್ತು.
ಈ ಹಿನ್ನೆಲೆಯಲ್ಲಿ ಕಾಸ್ಕ್ ನರಿಂಗಾನ ಕಾರ್ಯದರ್ಶಿ ನವಾಝ್ ಎಂ.ಬಿ. ನೇತೃತ್ವದಲ್ಲಿ ಶ್ರಮ ಸೇವೆ ನಡೆಸಲಾಯಿತು.
ಕಾಸ್ಕ್ ನರಿಂಗಾನ ಅಧ್ಯಕ್ಷ ಸಲಾಂ ಎಂ.ಎಚ್., ಇಕ್ಬಾಲ್ ಎಸ್.ಎಚ್. ಆಸಿಫ್ ಕೆ.ಎಚ್., ಮುಸ್ತಫಾ ಪಿ.ಎಂ., ಶರೀಫ್, ಅನೀಫ್ ಚೌಕ, ರಿಯಾಝ್, ಯೂಸುಫ್, ಸಾಜಿದ್, ಫೈಝಲ್, ಜಲೀಲ್, ರಿಫಾಝ್ ಮತ್ತಿತರರು ಭಾಗವಹಿಸಿದ್ದರು.
Kshetra Samachara
13/10/2020 04:25 pm