ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2 ಸಾವಿರ ಮಂದಿಗೆ ಉದ್ಯೋಗ ನೈಪುಣ್ಯ ತರಬೇತಿ: ಡಾ. ಕಲ್ಲಡ್ಕ ಪ್ರಭಾಕರ ಭಟ್

ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿಯವರ ಆಶಯದ ಆತ್ಮನಿರ್ಭರ ಕಾರ್ಯಕ್ರಮದ ಅಂಗವಾಗಿ ಪುತ್ರೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ 7 ಕಡೆ ನಡೆದ ಉದ್ಯೋಗ ನೈಪುಣ್ಯ ಶಿಕ್ಷಣ ಕಾರ್ಯಕ್ರಮದಲ್ಲಿ 2 ಸಾವಿರದಷ್ಟು ಶಿಕ್ಷಾರ್ಥಿಗಳು ತರಬೇತಿ ಪಡೆದಿದ್ದಾರೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದ್ದಾರೆ.

ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪತ್ತೂರು, ಸಹಕಾರ ಭಾರತಿ ದ.ಕ. ಜಿಲ್ಲೆ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು ಸಹಯೋಗದೊಂದಿಗೆ ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ಒಂದು ವಾರ ನಡೆದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಸಮಾರೋಪದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಡಾ.ಭಟ್, ಶಿಕ್ಷಾರ್ಥಿಗಳು ಕಲಿತ ಶಿಕ್ಷಣ ತಮ್ಮ ವೃತ್ತಿ ಜೀವನದಲ್ಲಿ ತೊಡಗಿಸಿಕೊಳ್ಳಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಮಾತನಾಡಿ, ಕೊರೊನಾದ ಈ ಸಂದರ್ಭ ಇಂತಹ ತರಬೇತಿ ಶಿಬಿರ ಸಕಾಲಿಕ, ಅಭಿನಂದನಾರ್ಹ ಎಂದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಚಾಲಕ ಮಹಾದೇವಶಾಸ್ತ್ರೀ, ಆರೆಸ್ಸೆಸ್ ಪುತ್ತೂರು ಜಿಲ್ಲಾ ಸಂಘಚಾಲಕ ಕೊಡ್ಮಣ್ ಕಾಂತಪ್ಪ ಶೆಟ್ಟಿ, ಗ್ರಾಮ ವಿಕಾಸ ಮಂಗಳೂರು ವಿಭಾಗ ಪ್ರಮುಖ ವೆಂಕಟರಮಣ ಹೊಳ್ಳ ಬಿ.ಸಿ.ರೋಡ್,ಉದ್ಯಮಿ ಮಂಜುನಾಥ ಪೈ ಬಿ.ಸಿ.ರೋಡು ವೇದಿಕೆಯಲ್ಲಿದ್ದರು.

ಸುಮಾರು 164 ಶಿಕ್ಷಾರ್ಥಿಗಳು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದು, ಪ್ರಮಾಣ ಪತ್ರ ವಿತರಿಸಲಾಯಿತು. ವಿನಾಯಕ ಬಿ.ಸಿ.ರೋಡ್ ಸ್ವಾಗತಿಸಿದರು.ಪ್ರಭಾಕರ ಪಿ.ಎಂ.ವೈಯಕ್ತಿಕ ಗೀತೆ ಹಾಡಿದರು.ನಾಗೇಶ್ ಟೈಲರ್ ವಂದಿಸಿದರು.ಶಿಬಿರದ ಸಂಚಾಲಕ ದಾಮೋದರ ನೆತ್ತರಕೆರೆ ನಿರೂಪಿಸಿದರು.

ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಮತ್ತು ವೆಲ್ಡಿಂಗ್, ಇಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್, ಕೃಷಿ ಯಂತ್ರೋಪಕರಣ ದುರಸ್ತಿ, ಇಲೆಕ್ಟ್ರಿಕ್ ಉಪಕರಣ ದುರಸ್ತಿ, ಹೈನುಗಾರಿಕೆ, ಗ್ರಾಹಕ ಮಾಹಿತಿ ಕೇಂದ್ರ, ಫ್ಯಾಶನ್ ಡಿಸೈನ್ಸ್, ಜೇನು ಕೃಷಿ ಮತ್ತು ಮೀನು ಸಾಕಾಣಿಕೆ, ಮೊಬೈಲ್ ರಿಪೇರಿ, ಸಿಸಿ ಟಿವಿ ಅಳವಡಿಕೆ ಬಗ್ಗೆ ತರಬೇತಿ ನೀಡಲಾಯಿತು.

Edited By : Nirmala Aralikatti
Kshetra Samachara

Kshetra Samachara

12/10/2020 04:04 pm

Cinque Terre

2.91 K

Cinque Terre

0

ಸಂಬಂಧಿತ ಸುದ್ದಿ