ಬಂಟ್ವಾಳ: ಕಲೈಮಾಮಣಿ, ಸ್ಯಾಕ್ಸೋಫೋನ್ ಮಾಂತ್ರಿಕ ಕದ್ರಿ ಗೋಪಾಲನಾಥ್ ನಿಧನ ಹೊಂದಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಅವರ ಪುಣ್ಯಸ್ಮರಣೆಯ ನೆನಪಿಗೆ ಹುಟ್ಟೂರು ಸಜಿಪದಲ್ಲಿ ಸ್ಮಾರಕವನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.
ಸಜೀಪಮೂಡ ಗ್ರಾಮದ ಮಿತ್ತ ಕೆರೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕುಟುಂಬದವರಾದ ಸರೋಜಿನಿ ಗೋಪಾಲನಾಥ್, ಗುರುಪ್ರಸಾದ್, ಮಣಿಕಾಂತ್, ರಮೇಶ್ ನಾಥ್, ಚಂದ್ರನಾಥ, ಗಣೇಶ್ ನಾಥ್, ಜಿಪಂ ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ, ಸಜಿಪ ಮಾಗಣೆ ತಂತ್ರಿ ಮಂಜಿನಡ್ಕ ಸುಬ್ರಹ್ಮಣ್ಯ ಭಟ್, ಕೆ. ಸೀತಾರಾಮ ಶೆಟ್ಟಿ, ವಸಂತ ಶೆಟ್ಟಿ,ಶ್ರೀಕಾಂತ್ ಶೆಟ್ಟಿ, ದಾಮೋದರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಈ ಸ್ಮಾರಕವನ್ನು ಸಂತೋಷ್ ಚಂದ್ರ ವಿನ್ಯಾಸಗೊಳಿಸಿದ್ದರು.
Kshetra Samachara
11/10/2020 09:11 pm