ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಹತ್ರಾಸ್ ಹೇಯ ಕೃತ್ಯ ಕ್ಕೆ ಪಿಎಫ್ ಐ ಆಕ್ರೋಶ

ಮಂಗಳೂರು: ಹತ್ರಾಸ್ ಪ್ರಕರಣ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ಯು.ಪಿ. ಸರ್ಕಾರ ಮಾಡುತ್ತಿರುವ ನಿರಾಧಾರ ಆರೋಪ ಖಂಡಿಸಿ ಹಾಗೂ ಸಿಎಫ್‌ಐ ಮುಖಂಡರ ವಿರುದ್ಧ ದಾಖಲಿಸಿರುವ ಯುಎಪಿಎ ಪ್ರಕರಣವನ್ನು ಹಿಂಪಡೆಯುವಂತೆ ಆಗ್ರಹಿಸಿ ಪಿಎಫ್‌ಐ ಕಾರ್ಯಕರ್ತರು ಬಜಪೆ ಬಸ್ ನಿಲ್ದಾಣದ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ತುಪೈಲ್ ಅತೂರು ಮಾತನಾಡಿದರು.

ಅಧ್ಯಕ್ಷತೆಯನ್ನು ಪಿಎಫ್‌ಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಮೊಯ್ದಿನ್ ಹಳೆಯಂಗಡಿ ವಹಿಸಿದ್ದರು. ಪಿಎಫ್‌ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಾವೂರು, ಪಿಎಫ್‌ಐ ಬಜಪೆ ಡಿವಿಜನ್ ಅಧ್ಯಕ್ಷ ಹಸೈನಾರ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಪಿಎಫ್‌ಐ ಜಿಲ್ಲಾ ಮುಖಂಡ ಮಜೀದ್ ಜೋಕಟ್ಟೆ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

09/10/2020 10:57 pm

Cinque Terre

3.88 K

Cinque Terre

1

ಸಂಬಂಧಿತ ಸುದ್ದಿ