ಬಂಟ್ವಾಳ: ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಮಾಡುವ ಪ್ರತಿ ಮನವಿಗೆ ಕೋಟ್ಯಂತರ ಅನುದಾನ ನೀಡುತ್ತಾ ನವಕರ್ನಾಟಕ ನಿರ್ಮಾಣ ಹೆಜ್ಜೆ ಇಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಪಾಲಿಗೆ ಕಾಮಧೇನು ಇದ್ದಂತೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಬಂಟ್ವಾಳ ಮಂಡಲ ಬಿಜೆಪಿ ವತಿಯಿಂದ ಕೊಯಿಲ ಗ್ರಾಮದ ಪಿಲ್ಕಾಜೆಗುತ್ತು ಎಂಬಲ್ಲಿ ನಡೆದ ಸಂಗಬೆಟ್ಟು ಮಹಾಶಕ್ತಿ ಕೇಂದ್ರದ ರಾಯಿ ಗ್ರಾಪಂ ವ್ಯಾಪ್ತಿಯ ಬಿಜೆಪಿ ಕುಟುಂಬ ಮಿಲನದಲ್ಲಿ ಮಾತನಾಡಿದರು.
ಗ್ರಾಪಂ ಚುನಾವಣಾ ಬಂಟ್ವಾಳ ಮಂಡಲ ಪ್ರಭಾರಿ ದೇವದಾಸ್ ಶೆಟ್ಟಿ, ಕೇಂದ್ರ ಮತ್ತು ರಾಜ್ಯದ ವಿವಿಧ ಯೋಜನೆ ಮತ್ತು ಬಿಡುಗಡೆಗೊಂಡ ಅನುದಾನ ಬಗ್ಗೆ ಮಾಹಿತಿ ನೀಡಿದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಬಿಜೆಪಿ ಕಾರ್ಯಕರ್ತ ಕೊರಗಪ್ಪ ಅಂಚನ್ ಪಿಲ್ಕಾಜೆಗುತ್ತು ಕಾರ್ಯಕ್ರಮ ಉದ್ಘಾಟಿಸಿದರು.
ಬಂಟ್ವಾಳ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಬಂಟ್ವಾಳ ಗ್ರಾಪಂ ಚುನಾವಣಾ ಸಹ ಪ್ರಭಾರಿ ಪ್ರಭಾಕರ ಪ್ರಭು,ಸಂಗಬೆಟ್ಟು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸೀತಾರಾಮ ಪೂಜಾರಿ ಉಪಸ್ಥಿತರಿದ್ದರು.
Kshetra Samachara
09/10/2020 08:49 pm