ಮಂಗಳೂರು : ದ.ಕ.ಜಿಲ್ಲೆಯ 7 ತಾಲೂಕಿನ 422 ಗ್ರಾಮಗಳ ಭೌತಿಕ ಆಕಾರ ಬಂದ್ ಗಣಕೀಕೃತಗೊಳಿಸುವ ಕಾರ್ಯ ಆರಂಭಗೊಂಡಿದ್ದು, ಪ್ರಗತಿಯಲ್ಲಿದೆ ಎಂದು ಭೂ ದಾಖಲೆ ಉಪನಿರ್ದೇಶಕರು ತಿಳಿಸಿದ್ದಾರೆ.
ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆ ಇಲಾಖೆ ಆಯುಕ್ತರು, ಪ್ರಗತಿ ಪರಿಶೀಲನೆ ನಡೆಸಿದ ವೇಳೆ 422 ಗ್ರಾಮಗಳ ಪೈಕಿ ಕೇವಲ 30 ಗ್ರಾಮಗಳಲ್ಲಿ ಮಾತ್ರ ಆಕಾರ ಬಂದ್ ಗಣಕೀಕೃತಗೊಂಡಿರುವುದು ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಅ.12ರೊಳಗೆ ಬಾಕಿ ಇರುವ 7 ತಾಲೂಕುಗಳ 112 ಗ್ರಾಮಗಳ ಗುರಿ ಸಾಧಿಸುವಂತೆ ಸೂಚಿಸಲಾಗಿದೆ.
ಅದರಂತೆ ತ್ವರಿತಗತಿಯಲ್ಲಿ ಕೆಲಸ ನಿರ್ವಹಿಸಲು ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ, ನಿಗದಿತ ಗುರಿ ಸಾಧಿಸಲು ಸರಕಾರಿ ರಜೆ ದಿನಗಳಲ್ಲಿ ಹಾಗೂ ಪುರುಷ ಭೂಮಾಪನ ಸಿಬ್ಬಂದಿ ರಾತ್ರಿ ಪಾಳಿಯಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜಿಲ್ಲೆಯ ಎಲ್ಲಾ ಗ್ರಾಮಗಳ ಆಕಾರಬಂದ್ ಗಣಕೀಕೃತ ಕೆಲಸ ನವೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ದಾಖಲೆಗಳ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Kshetra Samachara
08/10/2020 07:44 am