ಕಾರವಾರ: ಇಲ್ಲಿನ ಆಳ ಸಮುದ್ರದಲ್ಲಿ ಅವೈಜ್ಞಾನಿಕವಾಗಿ ಬುಲ್ ಟ್ರಾಲ್ ಮೀನುಗಾರಿಕೆ ಮಾಡುತ್ತಿದ್ದ ಮಲ್ಪೆಯ ಎರಡು ಟ್ರಾಲರ್ ಬೋಟ್‌ಗಳನ್ನು ಮೀನುಗಾರಿಕೆ ಇಲಾಖೆ ವಶಕ್ಕೆ ಪಡೆದು ಲಕ್ಷ ರೂ. ದಂಡ ವಿಧಿಸಿದೆ.
ಬುಲ್ ಟ್ರಾಲ್ ಮೂಲಕ ಮೀನುಗಾರಿಕೆ ನಡೆಸುವುದರಿಂದ ಅನೇಕ ಮೀನಿನ ಸಂತತಿ ನಾಶವಾಗುತ್ತದೆ ಎನ್ನುವ ಕಾರಣಕ್ಕೆ ಸರಕಾರ ಬುಲ್ ಟ್ರಾಲ್ ಮೀನುಗಾರಿಕೆ ನಡೆಸುವುದನ್ನು ನಿಷೇಧಿಸಿತ್ತು.
ಆದರೂ, ವಶಕ್ಕೆ ಪಡೆದ ಬೋಟ್‌ಗಳು ಬುಲ್ ಟ್ರಾಲ್ ಮೀನುಗಾರಿಕೆಯಲ್ಲಿ ನಿರತವಾಗಿತ್ತು ಎಂದು ಆರೋಪಿಸಿ ಮೀನುಗಾರಿಕೆ ಇಲಾಖೆ ಟ್ರಾಲರ್ ಬೋಟ್‌ಗಳನ್ನು ವಶಕ್ಕೆ ಪಡೆದು ಪ್ರತೀ ಬೋಟ್‌ಗೆ ತಲಾ 1ಲಕ್ಷ ರೂ. ದಂಡ ವಿಧಿಸಿದೆ.
ಕಳೆದ ಅನೇಕ ದಿನಗಳಿಂದ ಇಲ್ಲಿನ ಆಳ ಸಮುದ್ರದಲ್ಲಿ ಬುಲ್ ಟ್ರಾಲ್ ಮೂಲಕ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಮೀನುಗಾರರು ದೂರಿದ್ದರು.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅವೈಜ್ಞಾನಿಕವಾಗಿ ಮೀನುಗಾರಿಕೆ ಮಾಡುತ್ತಿದ್ದ ಬೋಟ್ ನ್ನು ವಶಕ್ಕೆ ಪಡೆದು ಕಾರವಾರದ ಬೈತಖೋಲ್ ಬಂದರಿಗೆ ತಂದಿದ್ದಾರೆ.
Kshetra Samachara
02/10/2020 08:07 pm