ಮುಲ್ಕಿ: ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಬಿರದಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಕೊಡೆತ್ತೂರು ದೇವಸ್ಯ ಮಠದ ಧರ್ಮದರ್ಶಿ ವೇದವ್ಯಾಸ ಉಡುಪ ಹೇಳಿದರು.
ಅವರು ಕಿನ್ನಿಗೊಳಿ ಸಮೀಪದ ಗೋಳಿಜೋರ ಶ್ರೀ ಹರಿಹರ ಭಜನಾ ಮಂದಿರಲ್ಲಿ ಕಟೀಲು ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ ಕಟೀಲು, ಶ್ರೀ ರಾಮ ಯುವಕ ವೃಂದ (ರಿ) ಗೋಜೋರ ಶ್ರೀ ಹರಿಹರ ಶ್ರೀ ರಾಮ ಭಜನಾ ಮಂದಿರ ಮತ್ತು ಗೋಳಿಜೋರ ಶ್ರೀ ಕೋರ್ದಬ್ಬು ದೈವಸ್ಥಾನ ದ ಜಂಟಿ ಆಶ್ರಯದಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ಕೆ.ಎಂ.ಸಿ ಅತ್ತಾವರ ಲಾಯಲ್ಟಿ ಕಾರ್ಡ್ ನೋಂದಣಿ, ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಗೋಳಿಜೋರ ಶ್ರೀ ಕೋರ್ದಬ್ಬು ದೈವಸ್ಥಾನದ ಅಧ್ಯಕ್ಷ ಶಂಕರ್ ಮಾಸ್ಟರ್ , ಹರಿಹರ ಭಜನಾ ಮಂದಿರ ಅಧ್ಯಕ್ಷ ಚೇತನ್, ಕಿನ್ನಿಗೋಳಿ ಗ್ರಾಮ ಮಾಜೀ ಅಧ್ಯಕ್ಷ ಚಂದ್ರಶೇಖರ, ಮಾಜೀ ಸದಸ್ಯ ಸಂತೋಷ್ ಕುಮಾರ್, ಕಟೀಲು ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆಯ ಡಾ.ನಿತ್ಯಾನಂದ ಚೌಟ,ಡಾ.ರಶ್ಮಿ,ಡಾ.ತಾರಾ, ನಿತೇಶ್ ಶೆಟ್ಟಿ ಎಕ್ಕಾರ್, ಪ್ರಕಾಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಸಾಮಾನ್ಯ ರೋಗ, ಎಲುಬು ಮತ್ತು ಮಕ್ಕಳ ತಪಾಸಣೆ,ಇಸಿಜಿ ತಪಾಸಣೆ ಮಾಡಲಾಯಿತು.
Kshetra Samachara
19/09/2022 03:28 pm