ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ಹಾಲಿನ ಲಕೋಟೆ,ಪೇಪರ್ ಗಳಿದ್ದರೆ ರೆಡಿ ಮಾಡಿಟ್ಟುಕೊಳ್ಳಿ:ಪರಿಸರ ಸಂರಕ್ಷಣೆ ಕಳಕಳಿಯೊಂದಿಗೆ ಬರ್ತಾರೆ ಈ ಮಕ್ಕಳು!

ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು

ಮಂಗಳೂರು: ಹಳೆಯ ಪೇಪರ್, ಹಾಲು, ಮೊಸರುಗಳ ಲಕೋಟೆಗಳಿದ್ದರೆ ಮನೆಮನೆಗೆ ಬಂದು ಗುಜರಿಯವರು ಬಂದು ಖರಿದಿಸೋದು ಮಾಮೂಲಿ. ಆದರೆ ಮಂಗಳೂರಿನ ಮಕ್ಕಳ ತಂಡವೊಂದು ಹಳೆಯ ಪೇಪರ್, ಹಾಲಿನ ಲಕೋಟೆಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದೆ. ಅಂದ ಹಾಗೆ ಮಕ್ಕಳಿಗೇಕೆ ಹಾಲು, ಮೊಸರಿನ ಲಕೋಟೆ, ಹಳೆಯ ಪೇಪರ್ ಗಳು ಎಂದು ಯೋಚನೆ ಮಾಡುತ್ತಿದ್ದೀರಾ?. ಹಾಗದರೆ ಈ ಬಗ್ಗೆ ತಿಳಿಯಲು ಈ ಸ್ಟೋರಿ ನೋಡಿ...!

ಹೌದು ಮಂಗಳೂರಿನ ಎಕ್ಕೂರು ಸಮೀಪದ ಈ ಮಕ್ಕಳ ತಂಡ ಕಳೆದ ಆರು ವರ್ಷಗಳಿಂದ ಗ್ರೀನ್ ವಾರಿಯರ್ ಎಂಬ ತಂಡವನ್ನು ಕಟ್ಟಿಕೊಂಡು ಪರಿಸರ ಜಾಗೃತಿಯನ್ನು ಮಾಡುತ್ತಿದೆ. ಈ ಬಾರಿ ನೂತನ ಅಭಿಯಾನದೊಂದಿಗೆ ಗಮನ ಸೆಳೆಯುತ್ತಿದ್ದಾರೆ. ಸುಮಾರು 50 ಮಕ್ಕಳಿರುವ ಈ ತಂಡ ಮನೆಮನೆಗೆ ತೆರಳಿ ಹಾಲು, ಮೊಸರಿನ ಪ್ಯಾಕೆಟ್, ಪೇಪರ್ ಅನ್ನು ಎಲ್ಲೆಂದರಲ್ಲಿ ಎಸೆದು ಪರಿಸರ ವಿನಾಶಕ್ಕೆ ಕಾರಣವಾಗದೆ, ತಮಗೆ ನೀಡಿದ್ದಲ್ಲಿ ಅದನ್ನು ಮರುಬಳಕೆ ಮಾಡಿ ಸದುದ್ದೇಶಕ್ಕೆ ಬಳಸುತ್ತೇವೆ ಎಂದು ಜಾಗೃತಿ ಮೂಡಿಸುತ್ತಿದ್ದಾರೆ. ಈ ಗ್ರೀನ್ ವಾರಿಯರ್ ತಂಡದಲ್ಲಿ 5ನೇ ತರಗತಿಯಿಂದ ಪದವಿವರೆಗಿನ ಮಕ್ಕಳು ಇದ್ದಾರೆ.

ಅಂದ ಹಾಗೆ ಈ ತಂಡ ಮನೆಮನೆಗಳಿಂದ ಸಂಗ್ರಹಿಸಿರುವ ಹಾಲು, ಮೊಸರುಗಳ ಪ್ಯಾಕೆಟ್ ಗಳನ್ನು ಮುಂಬೈಯ ಪ್ಲಾಸಿಕ್ ಮರುಬಳಕೆಯ ಸಂಸ್ಥೆಗೆ ಕಳುಹಿಸಿಕೊಡುತ್ತಾರೆ‌. ಅವರು ಈ ಪ್ಲಾಸ್ಟಿಕ್ ಗಳನ್ನು ಕರಗಿಸಿ ವಿವಿಧ ಸಾಮಾಗ್ರಿಗಳನ್ನು ತಯಾರಿಸುತ್ತಾರೆ. ಅದೇ ರೀತಿ ಧಾರವಾಡದಲ್ಲಿ ಪೇಪರ್ ಗಳಿಂದ ಪೆನ್ಸಿಲ್ ತಯಾರಿಸುವ ಫ್ಯಾಕ್ಟರಿ ಇದ್ದು, ಅವರಿಗೆ ಸಂಗ್ರಹಿಸಲಾಗುವ ಪೇಪರ್ ಅನ್ನು ಈ ತಂಡ ನೀಡುತ್ತದೆ‌. ಈ ಮೂಲಕ ಪೆನ್ಸಿಲ್ ತಯಾರಿಕೆಗೆ ಮರಗಳು ಉರುಳುವುದು ತಪ್ಪುತ್ತದೆ ಎಂಬುದು ಈ ತಂಡದ ಅಭಿಪ್ರಾಯ.

ಈ ತಂಡ ಈಗಾಗಲೇ ಮನೆಮನೆಗಳಿಗೆ ತೆರಳಿ ಅಭಿಯಾನ ಆರಂಭಿಸಿದೆ. ಮುಂದೆ ತಿಂಗಳಿಗೊಂದು ಬಾರಿ ಅಥವಾ ಮೂರು ತಿಂಗಳಿಗೊಮ್ಮೆ ಸಂಗ್ರಹವಾದ ಪೇಪರ್, ಹಾಲು, ಮೊಸರು ಪ್ಯಾಕೆಟ್ ಗಳನ್ನು ಮನೆಮನೆಗಳಿಂದ ಸಂಗ್ರಹಿಸಿ ಮರುಬಳಕೆ ಮಾಡುವ ಉದ್ದೇಶವನ್ನು ತಂಡ ಹೊಂದಿದೆ. ಒಟ್ಟಿನಲ್ಲಿ ಮಕ್ಕಳಲ್ಲಿ ಇಂತಹ ಜಾಗೃತಿ ಮೂಡಿರುವುದು ನಿಜವಾಗಿಯೂ ಶ್ಲಾಘನೀಯ. ಮಕ್ಕಳ ಈ ಕಾರ್ಯಕ್ಕೆ ಅವರ ಹೆತ್ತವರೂ ಬೆಂಬಲ ನೀಡಿದ್ದು, ಅವರ ಅಕ್ಕಪಕ್ಕದ, ಪರಿಸರದ ಮನೆಮಂದಿಯೂ ಸಕಾರಾತ್ಮಕ ಸ್ಪಂದನೆ ನೀಡುತ್ತಿದ್ದಾರಂತೆ. ಇಂತಹ ಕಾಳಜಿಗಳೇ ಪರಿಸರ ಉಳಿಸುವ ನಿಟ್ಟಿನಲ್ಲಿ ಕಿಂಚಿತ್ತಾದರೂ ಸಹಕಾರಿಯಾಗಬಲ್ಲದು ಎಂಬುದು ಪಬ್ಲಿಕ್ ನೆಕ್ಸ್ಟ್ ನ‌ ಆಶಯ.

Edited By : Nagesh Gaonkar
Kshetra Samachara

Kshetra Samachara

19/07/2022 09:06 pm

Cinque Terre

8.48 K

Cinque Terre

5

ಸಂಬಂಧಿತ ಸುದ್ದಿ