ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಕ್ಷಿಕೆರೆ:ಶ್ರೀ ವಿನಾಯಕ ಮಿತ್ರ ಮಂಡಳಿ (ರಿ) ವತಿಯಿಂದ ಗದ್ದೆಗಳ ಪುನಶ್ಚೇತನ

ಮುಲ್ಕಿ:ಹಳೆ ಬೇರು ಹೊಸ ಚಿಗುರು ಸೇರಿರಲು, ಮರು ಸೊಬಗು ಎಂಬ ಮಾತಿನಂತೆ ಯುವ ಜನತೆ ಆಧುನಿಕ ಜೀವನ ಶೈಲಿಯತ್ತ ಮುಖಮಾಡಿರುವ ಕಾಲಘಟ್ಟದಲ್ಲಿ ಪಕ್ಷಿಕೆರೆಯ ಶ್ರೀ ವಿನಾಯಕ ಮಿತ್ರ ಮಂಡಳಿ (ರಿ)ಯ ಯುವಕರ ತಂಡವು ತಮ್ಮೂರಿನಮಣ್ಣಿನ ಗುಣವನ್ನು, ಪ್ರಕೃತಿಯ ಕಂಪನ್ನು, ಕೃಷಿ ಜೀವನದ ನೈಜ ಸೊಗಡನ್ನು ಅನುಭವಿಸುವ ನಿಟ್ಟಿನಲ್ಲಿ ಹಳೆಯಂಗಡಿ ಸಮೀಪದ ತೋಕೂರು ಗ್ರಾಮದ ಕಂಬಳಬೆಟ್ಟುವಿನಲ್ಲಿ ದಿ.ಮಾರ್ಗರೇಟ್ ಲೂಯಿಸ್ ಅವರ ಮಕ್ಕಳ ಜಾಗದಲ್ಲಿ 5 ಗದ್ದೆಗಳನ್ನು ದುಡಿಯುವುದಕ್ಕಾಗಿ ವಹಿಸಿಕೊಂಡು ಗದ್ದೆಗಳನ್ನು ಪುನಶ್ಚೇತನನಗೊಳಿಸಿ ಬಿತ್ತನೆ ಕಾರ್ಯವನ್ನು ನಡೆಸಿತು.

ಈ ಕಾರ್ಯದಲ್ಲಿ ಮಂಡಳಿಯ ಗೌರವಧ್ಯಕ್ಷ ಧನಂಜಯ ಪಿ ಶೆಟ್ಟಿಗಾರ್, ಅಧ್ಯಕ್ಷ ಚಂದ್ರಹಾಸ , ಕಾರ್ಯದರ್ಶಿ ಪ್ರವೀಣ್ ಹಾಗೂ ಮಂಡಳಿ ಸದಸ್ಯರು ಭಾಗವಹಿಸಿದರು.

Edited By : PublicNext Desk
Kshetra Samachara

Kshetra Samachara

18/07/2022 10:41 am

Cinque Terre

2.49 K

Cinque Terre

0

ಸಂಬಂಧಿತ ಸುದ್ದಿ