ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:" ಗಿಡ ಮರ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿರಲಿ"

ಮಂಗಳೂರು: ನಗರದ ಹೊರವಲಯದ 19 ನೇ ಪಚ್ಚನಾಡಿ ವಾರ್ಡ್ ನ ಸಂತೋಷ್ ನಗರ ಪ್ರದೇಶದ ಆರ್ ಟಿ ಓ ಟೆಸ್ಟ್ ಯಾರ್ಡ್ ಬಳಿ ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ, ಆಟದ ಮೈದಾನದ ಬದಿಯಲ್ಲಿ, ಮುಖ್ಯ ರಸ್ತೆ ಇಕ್ಕೆಲಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಹಾಗೂ ಮನೆ ಮನೆ ವೃಕ್ಷ ಕಾರ್ಯಕ್ರಮಕ್ಕೆ ಶಾಸಕರಾದ ಡಾ. ಭರತ್ ಶೆಟ್ಟಿಯವರು ಚಾಲನೆ ನೀಡಿ ಮಾತನಾಡಿ ಗಿಡ ಮರ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

ಅರಣ್ಯ ಇಲಾಖೆಯವರ ಸಹಯೋಗದಲ್ಲಿ, ಸ್ವಚ್ಛ ಸಂತೋಷ್ ನಗರ ಮತ್ತು ಎಸ್.ಪಿ ಎನ್ ತಂಡದವರ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.

ಸ್ಥಳೀಯ ಕಾರ್ಪೊರೇಟರ್ ಸಂಗೀತಾ ಆರ್ ನಾಯಕ್, ಡಿ ಎಫ್ ಒ ದಿನೇಶ್, ವಲಯ ಅರಣ್ಯ ಅಧಿಕಾರಿ ಪ್ರಶಾಂತ್ ಪೈ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ, ಪ್ರಮುಖರಾದ ಪ್ರಶಾಂತ್ ಪೈ, ರಾಕೇಶ್, ಪ್ರವೀಣ್ , ಪ್ರದೀಪ್ ಗೌರೀಶ್, ಸಂದೇಶ್ ಪೂಜಾರಿ, ನವೀನ್ ಶೆಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು, ಸ್ಥಳೀಯ ನಿವಾಸಿಗಳು, ಕಾರ್ಯಕರ್ತ ಬಂಧುಗಳು, ಪರಿಸರ ಪ್ರೇಮಿಗಳು ಹಾಜರಿದ್ದು ಯಶಸ್ವಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಪರಿಸರ ರಕ್ಷಣೆಯಂತಹ ಅಭೂತಪೂರ್ವ ಕಾರ್ಯವನ್ನು ಆಯೋಜಿಸಿದ ಸಂಘಟಕರಿಗೆ ಶಾಸಕರ ನೇತೃತ್ವದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಪ್ರತೀ ಮನೆಯವರು ಗಿಡಗಳನ್ನು ಪಡೆದು ಪೋಷಣೆ ಮಾಡುವುದಾಗಿ ಪ್ರತಿಜ್ಞೆಗೈದರು.

Edited By : PublicNext Desk
Kshetra Samachara

Kshetra Samachara

26/06/2022 07:35 pm

Cinque Terre

1.83 K

Cinque Terre

0

ಸಂಬಂಧಿತ ಸುದ್ದಿ