ಮಂಗಳೂರು: ನಗರದ ಬೋಳೂರು ಸುಲ್ತಾನ್ ಬತ್ತೇರಿ ಯಲ್ಲಿ ಮೊಗವೀರ ಮಹಾಸಭಾ (ರಿ). ವತಿಯಿಂದ ಗಾನ ಕೋಗಿಲೆ ಲತಾ ಮಂಗೇಶ್ಕರ್ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಮಂಗಳೂರಿನ ಪ್ರಖ್ಯಾತ ಮರಳು ಶಿಲ್ಪಿ ಕಲಾವಿದ ಹರೀಶ್ ಆಚಾರ್ಯ ಹಾಗೂ ಸಹ ಕಲಾವಿದರದ ಪ್ರಸಾದ್ ಮೂಲ್ಯ ,ರವಿ ಪೂಜಾರಿ ಪೊಳಲಿ ರವರ ಕೈ ಚಳಕದಲ್ಲಿ ಭಾರತ ರತ್ನ ಪುರಸ್ಕೃತರಾದ ಲತಾ ಮoಗೇಶ್ಕರ್ ರವರ ಮರಳಿನ ಕೃತಿ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಬೋಳೂರು ಮೊಗವೀರ ಮಹಾಸಭಾ (ರಿ).ನ ಅಧ್ಯಕ್ಷ ರಾಜಶೇಖರ ಕರ್ಕೇರ,ದೇವದಾಸ್ ಬೋಳೂರು,ಶ್ರೀ ಮಾರಿಯಮ್ಮ ದೇವಸ್ಥಾನ ಉರ್ವ ಆಡಳಿತ ಮುಕ್ತೇಸ್ತರ,ದೇವಾನಂದ ಗುಜರನ್,ಮಹಾಸಭಾದ ಜಯರಾಜ್ ಗುರಿಕಾರ, ಸುಭಾಷ್ ಕುಂದರ್, ರಂಜನ್ ಕಾಂಚನ್ ,ಯಶವಂತ್ ಮೆಂಡನ್ ,ಶಶಿಕುಮಾರ್ ಶ್ರೀಯಾನ್ , ಜಗದೀಶ್ ಬಂಗೇರ,ಶರತ್ ಸಾಲಿಯನ್ ಸುಧೀರ್ ಶ್ರೀಯಾನ್,ಸತೀಶ್ ಸುವರ್ಣ, ಮಹಿಳಾ ಮಂಡಲದ ಅಧ್ಯಕ್ಷೆ ಸವಿತಾ ರಘು ಹಾಗೂ ಸದಸ್ಯೆಯರು ಮತ್ತು ಗ್ರಾಮದ ಸದಸ್ಯರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
Kshetra Samachara
09/02/2022 10:47 pm