ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಜನಾಡಿ: ಕಾಗೆಗಳ ಮೃತ್ಯು ಪ್ರಕರಣ; ಹಕ್ಕಿಜ್ವರ ವರದಿ ನೆಗೆಟಿವ್, ಜನತೆ ನಿಟ್ಟುಸಿರು

ಮಂಗಳೂರು: ಮಂಜನಾಡಿ ಗ್ರಾಮದ ಅರಂಗಡಿಯಲ್ಲಿ ಪತ್ತೆಯಾದ ಕಾಗೆಗಳ ಕಳೇಬರ ಪ್ರಕರಣದಿಂದ ಹಕ್ಕಿಜ್ವರದ ಆತಂಕ ದೂರವಾಗಿದೆ.

ಲ್ಯಾಬ್ ಪರೀಕ್ಷೆಯಲ್ಲಿ ಹಕ್ಕಿಜ್ವರ ಕುರಿತ ವರದಿ ನೆಗೆಟಿವ್ ಬಂದಿದೆ. ಎಲ್ಲೆಡೆ ಹಕ್ಕಿಜ್ವರದ ಭೀತಿ ಇರುವಾಗಲೇ ಜ.5ರಂದು ಮಂಜನಾಡಿ ಅರಂಗಡಿಯಲ್ಲಿನ ಮರವೊಂದರ ಕೆಳಗೆ ಆರು ಕಾಗೆಗಳ ಮೃತದೇಹ ದೊರಕಿದ್ದರಿಂದ ಜನರು ಹಕ್ಕಿಜ್ವರದ ಆತಂಕಕ್ಕೆ ಒಳಗಾಗಿದ್ದರು.

ಮಾಹಿತಿ ಲಭ್ಯವಾದ ತಕ್ಷಣ ಸ್ಥಳಕ್ಕೆ ಧಾವಿಸಿದ್ದ ಪಶು ವೈದ್ಯಕೀಯ ಅಧಿಕಾರಿಗಳು ಕಾಗೆಗಳ ಅಂಗಾಂಗಗಳನ್ನು ಹಕ್ಕಿಜ್ವರ ಪರೀಕ್ಷೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ರವಾನಿಸಿದ್ದರು. ಶುಕ್ರವಾರ ಪರೀಕ್ಷಾ ವರದಿ ಬಂದಿದ್ದು, ವರದಿ ನೆಗೆಟಿವ್ ಆಗಿದೆ. ಇದರಿಂದ ಹಕ್ಕಿಜ್ವರ ಕುರಿತ ಜಿಲ್ಲೆಯ ಜನತೆಯ ಆತಂಕ ದೂರವಾದಂತಾಗಿದೆ.

Edited By : Nagaraj Tulugeri
Kshetra Samachara

Kshetra Samachara

08/01/2021 10:10 pm

Cinque Terre

12.47 K

Cinque Terre

0

ಸಂಬಂಧಿತ ಸುದ್ದಿ