ಬಂಟ್ವಾಳ: ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಭಾಗ, ಬೆಂಗಳೂರು, ಮಂಗಳೂರಿನಲ್ಲಿ ಮಂಗಳವಾರ ಸಂಜೆ ವೇಳೆ ಭಾರಿ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ನಿಜವಾಗಿದ್ದು, ಮಂಗಳವಾರ ಸಂಜೆ ಸುಮಾರು 6ರ ಬಳಿಕ ಬಂಟ್ವಾಳ ತಾಲೂಕಿನ ಹಲವೆಡೆ ಗಾಳಿ, ಗುಡುಗು, ಸಿಡಿಲಿನ ಸಹಿತ ಮಳೆಯಾಗಿದೆ.
ಭಾರಿ ಸೆಖೆ ಇದ್ದ ಪ್ರದೇಶಗಳಲ್ಲೀಗ ತಂಪಾದ ವಾತಾವರಣ ಮೂಡಿದ್ದರೆ, ಬೀದಿ ಬದಿಯಲ್ಲಿ ವ್ಯಾಪಾರ ನಡೆಸುವವರು ಬಸ್ ನಿಲ್ದಾಣಗಳಲ್ಲಿ ಕಾಯುವವರು ಸಮಸ್ಯೆ ಅನುಭವಿಸಬೇಕಾಯಿತು.
ಮಳೆಯಿಂದಾಗಿ ಕೆಲವೆಡೆ ರಸ್ತೆ ಬದಿ ಹಾಕಿದ ಮಣ್ಣು ರಸ್ತೆಗೆ ಬಂದಿದ್ದು, ವಾಹನ ಸವಾರರೂ ರಾತ್ರಿ ವೇಳೆ ಜಾಗ್ರತೆಯಿಂದ ತೆರಳದೇ ಇದ್ದರೆ ಅಪಘಾತ ಭೀತಿ ಎದುರಿಸಬೇಕಾಗಬಹುದು.
Kshetra Samachara
08/12/2020 07:47 pm