ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಚಳಿಗಾಲ ಆರಂಭವಾಗಿದ್ದರೂ, ಶುಕ್ರವಾರ ಜಿಲ್ಲೆಯ ನಾನಾ ಕಡೆ ಅಕಾಲಿಕ ಮಳೆ ಸುರಿದಿದೆ.
ಶುಕ್ರವಾರ ಮಧ್ಯಾಹ್ನ ಕೆಲಹೊತ್ತು ಮೋಡ ಕವಿದ ವಾತಾವರಣವಿದ್ದರೂ ಮಳೆ ಸುರಿಯುವ ಸಾಧ್ಯತೆ ಕಡಿಮೆ ಇತ್ತು. ಸಂಜೆ ವೇಳೆ ಮೋಡ ದಟ್ಟವಾಗುತ್ತಿದ್ದಂತೆಯೇ ಕೆಲಹೊತ್ತು ಮಳೆ ಸುರಿಯಿತು. ಅಲ್ಲದೆ, ತಾಲೂಕಿನ ಮಂಗಳೂರು ನಗರ, ಸುರತ್ಕಲ್ , ಮುಲ್ಕಿ ಹೋಬಳಿ, ಕಿನ್ನಿಗೋಳಿಯ ಕೆಲವೆಡೆ ಮಳೆಯಾಗಿದೆ.
Kshetra Samachara
13/11/2020 09:17 pm