ಕಿಲ್ಪಾಡಿ ಗ್ರಾಮ ಪಂಚಾಯತ್ ವತಿಯಿಂದ ಋತುಚಕ್ರ ನೈರ್ಮಲ್ಯ ದಿನಾಚರಣೆ ಅಂಗವಾಗಿ ಮುಟ್ಟಿನ ಒಗ್ಗಟ್ಟು ಎಂಬ ಶೀರ್ಷಿಕೆಯಡಿ it's my day"ಎಂಬ ವಿಶೇಷ ಆಂದೋಲನ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಲೀಲಾವತಿ ವಹಿಸಿದ್ದರು.
ಸಭೆಯಲ್ಲಿ ಪಂಚಾಯತ್ ಪಿಡಿಒ ಪೂರ್ಣಿಮಾ ಮಾತನಾಡಿ ಋತುಚಕ್ರ ನೈರ್ಮಲ್ಯತೆಗೆ ಸಂಬಂಧಿಸಿದಂತೆ ಗ್ರಾಮೀಣ ಭಾಗದ ಮಹಿಳೆಯರು ಇಂದಿಗೂ ಹಳೆಯ ಕ್ರಮವನ್ನೇ ಅನುಸರಿಸುವುದರ ಜೊತೆಗೆ ಋತುಚಕ್ರದ ವೇಳೆ ಎದುರಾಗುವ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಿದ್ದಾರೆ. ಇಂತಹ ಮಹಿಳೆಯರನ್ನು ಸದೃಢವಾಗಿ ರೂಪಿಸುವ ಸಲುವಾಗಿ ಋತುಚಕ್ರ ನೈರ್ಮಲ್ಯ ದಿನಾಚರಣೆ ಯನ್ನು"it's my day"ಎಂಬ ವಿಶೇಷ ಆಂದೋಲನ ಮೂಲಕ ಮಹಿಳೆಯರಲ್ಲಿ ಜಾಗೃತಿಯನ್ನು ಮೂಡಿಸುವ ಯತ್ನ ಮಾಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಪಂಚಾಯತ್ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳ ಮಹಿಳೆಯರು ಋತುಚಕ್ರವನ್ನು 28 ದಿನಗಳೆಂದು ಪರಿಗಣಿಸಿರುವುದರಿಂದ 23 ಬಿಳಿ ಮಣಿ, ಐದು ಕೆಂಪು ಮಣಿ ಒಳಗೊಂಡ ಬ್ರಾಸ್ಲೈಟ್ ಧರಿಸುವ ಮೂಲಕ ಋತುಚಕ್ರದ ಕಳಂಕವನ್ನು ದೂರಮಾಡುವ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಶಾಂತ, ಲಲಿತ ಯಾದವ್ ವಿವಿಧ ಸಂಘಸಂಸ್ಥೆಗಳ ಮಹಿಳೆಯರು ಉಪಸ್ಥಿತರಿದ್ದರು.
Kshetra Samachara
30/05/2022 03:28 pm