ಬೆಂಗಳೂರು: ನಗರದ ಮೌರ್ಯ ವ್ರತ್ತ ದಲ್ಲಿ, ಭಾರತ ರಕ್ಷಣಾ ವೇದಿಕೆಯ ಸಂಸ್ಥಾಪಕ ಶ್ರೀ ಭರತ್ ಶೆಟ್ಟಿ ಯವರ ಸಾರಥ್ಯದಲ್ಲಿ ಕರ್ನಾಟಕ ರಾಜ್ಯದ ನೆಲದ ಭಾಷೆಗಳಾದ ತುಳು ಮತ್ತು ಕೊಡವ ಭಾಷೆಗೂ ಕನ್ನಡದ ಜೊತೆಗೆ ಆಡಳಿತ ಭಾಷೆಯ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಬ್ರಹತ್ ಹಕ್ಕೋತ್ತಾಯ ನಡೆಯಿತು.
ಕನ್ನಡ ಒಕ್ಕೂಟ, ಕರ್ನಾಟಕ ಸಂರಕ್ಷಣಾ ವೇದಿಕೆ,ಮಹಿಳಾ ರಕ್ಷಣಾ ವೇದಿಕೆ, ದೇಶ ಪ್ರೇಮಿಗಳ ಸೇನೆ, ಸೇವಾಲಯ ಸೇವಾ ಸಮಿತಿ ಟ್ರಸ್ಟ್, ಜಯಕರ್ನಾಟಕ ಜನಪರ ವೇದಿಕೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು; ಮತ್ತು ಬೆಂಗಳೂರಿನ ಪ್ರಮುಖ ತುಳು ಸಂಘಟನೆಗಳಾದ ತುಳುಕೂಟಬೆಂಗಳೂರು, ತುಳುವೆರೆಂಕುಲು ಬೆಂಗಳೂರು,ತುಳುವೆರೆ ಚಾವಡಿ ಬೆಂಗಳೂರು, ಬೆಂಗಳೂರು ಕರಾವಳಿಗರ ವೇದಿಕೆ, ತೌಳವ ಸಂಘಮ, ಯಕ್ಷತರಂಗ ಬೆಂಗಳೂರು, , ಬೆಂಗಳೂರು ಬಂಟರ ಸಂಘ, ಬಿಲ್ಲವ ಅಸೋಸಿಯೇಷನ್ ಬೆಂಗಳೂರು, ಜೈನ್ ಅಸೋಷಿಯೇಷನ್ ಇತ್ಯಾದಿ ಪ್ರತಿಷ್ಠಿತ ಸಂಘಟನೆಗಳ ಪ್ರಮುಖರು ಭಾಗವಹಿಸಿ ತುಳು ಭಾಷೆಗಾಗುತ್ತಿರುವ ಅನ್ಯಾಯಗಳನ್ನು ಖಂಡಿಸಿ, ತುಳುವಿಗೆ ಅಧಿಕೃತ ಸ್ಥಾನ ಮಾನ ನೀಡಬೇಕೆಂದು ಒಕ್ಕೊರಳಿನಿಂದ ಸರಕಾರ ವನ್ನು ಆಗ್ರಹಿಸಿದರು.
ಜಯಕರ್ನಾಟಕ ಜನಪರ ವೇದಿಕೆಯ ಮುಖಂಡರಾದ ಗುಣರಂಜನ್ ಶೆಟ್ಟಿ, ಉದಯ ಶೆಟ್ಟಿ, ಸುರೇಶ ರೈ, ಅನಿಲ್ ಶೆಟ್ಟಿ ಪ್ರಕಾಶ್ ರೈ. ಹಿಂದೂಪರ ಹೋರಾಟಗಾರ ಮಧುಗಿರಿ ಮೋದಿ, ಕನ್ನಡ ಸಂಘಟನೆಗಳ ಒಕ್ಕೂಟದ ಗೀತಾ ಹಾಗೂ ಇನ್ನಿತರರು
ತುಳು ಭಾಷೆಯ ವಿಶೇಷತೆಯ ಬಗ್ಗೆ ಮಾತಾನ್ನಾಡಿ, ನಮ್ಮ ಬೇಡಿಕೆಗೆ ಸರಕಾರ ಈ ಕೂಡಲೇ ಸ್ಪಂಧಿಸದೇ ಹೋದಲ್ಲಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು.
ಬೆಂಗಳೂರಿನ ತುಳು ಸಂಘಟನೆಗಳ ಪ್ರಮುಖರುಗಳಾದ ಲ. ಉಪ್ಪಳ ರಾಜರಾಮ್ ಶೆಟ್ಟಿ, ಸುಂದರಾಜ್ ರೈ, ವೈ. ಜಯಂತ್ ರಾವ್, ಹರ್ಷ ಜೈನ್, ವಿಜಯ ಕುಮಾರ್ ಕುಲಶೇಖರ, ಪುರುಷೋತ್ತಮ ಚೇಂಡ್ಲಾ, ಆಶಾನಂದ ಕುಲಶೇಖರ, ವಿ. ಶಾಂತರಾಮ ಶೆಟ್ಟಿ, ಉಮೇಶ್ ರೈ, ಆದಿ. ಭಾಸ್ಕರ್, ರೋಷನ್ ಡಿಸೋಜ ಬೆಳ್ಮನ್ ಮುಂತಾದ ಪ್ರಮುಖರು ಮಾತನ್ನಾಡಿ, ತುಳು ಭಾಷೆಗಿರುವ ಅರ್ಹತೆಗಳನ್ನು ಸವಿಸ್ತಾರವಾಗಿ ವಿವರಿಸಿ, ತುಳುವರ ಹಕ್ಕುಗಳಿಗಾಗಿ ಸರಕಾರವನ್ನು ಆಗ್ರಹಿಸಿದರು.
ಹಕ್ಕೋತ್ತಾಯ ಸಂಘಟಕ, 'ತುಳುವೆರೆಂಕುಲು ಬೆಂಗಳೂರು' ಪ್ರಧಾನ ಕಾರ್ಯದರ್ಶಿ ಪಳ್ಳಿ ವಿಶ್ವನಾಥ್ ಶೆಟ್ಟಿ ಮಾತನ್ನಾಡಿ, ತುಳುಭಾಷೆ ಕೇವಲ ಭಾಷೆ ಅಷ್ಟೇ ಅಲ್ಲ, ತುಳುಎಂದರೆ ಜಗತ್ತಿನ ಅನನ್ಯ ಸಂಸ್ಕೃತಿ ಸಂಸ್ಕಾರದ ಪ್ರತೀಕ, ಜಗತ್ತಿನಾದ್ಯಂತ 2 ಕೋಟಿ ಜನರಾಡುವ ಸುಸಂಸ್ಕೃತ ಭಾಷೆ ತುಳುವಿಗೆ ಸ್ವಂತಹ ಲಿಪಿ ಇದೆ. ತುಳು ಪಂಚ ದ್ರಾವಿಡ ಭಾಷೆಗಳಲ್ಲೊಂದು, ತುಳು ಹೊರತು ಪಡಿಸಿ ಇತರ 4 ಭಾಷೆಗಳೂ ಶಾಸ್ತ್ರಿಯ ಸ್ಥಾನ ಮಾನ ಹೊಂದಿದೆ, ಸಂವಿಧಾನದ 8 ನೇ ಪರಿಚ್ಚೇಧಕ್ಕೆ ಸೇರಿದೆ. ಆದರೆ ತುಳುವಿನ ಬಗ್ಗೆ ಮಾತ್ರಯಾಕ್ಕೆ ಮಲತಾಯಿ ಧೋರಣೆಯೆಂದು ಪ್ರಶ್ನಿಸಿದರು.
ಹಕ್ಕೋತ್ತಾಯದ ಸಾರಥಿ ಭರತ್ ಶೆಟ್ಟಿಯವರು ಕೊನೆಯಲ್ಲಿ ಮಾತನ್ನಾಡಿ, ಯಕ್ಷಗಾನ, ಕಂಬಳ, ದೈವಾರಾಧನೆ, ನಾಗರಾಧನೆ, ಪಿಲಿನಲಿಕೆ ಮುಂತಾದ ಸಾಂಸ್ಕೃತಿಕ ಶ್ರೀಮಂತಿಕೆ ಇರುವ ತುಳು ಭಾಷೆಗೆ ಮಾನ್ಯತೆ, ಸ್ಥಾನ ಮಾನ ನೀಡದೇ ಹೋದರೆ ಮುಂದಿನ ದಿನಗಳಲ್ಲಿ ಅತ್ಯುಗ್ರ ಹೋರಾಟ ವನ್ನು ಸಂಘಟಿಸ ಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.
ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದ ಯುವ ಮುಂದಾಳುಗಳಾದ ಗೋಪಾಲ್ ಪೂಜಾರಿ ಪಟ್ಟೆ, ಸದಾನಂದ ಕಾರ್ಕಳ, ಶಿವಾನಂದ ಸಾಲ್ಯಾನ್ ಈ ಬ್ರಹತ್ ಹಕ್ಕೋತ್ತಾಯ ವನ್ನು ಯಶಸ್ವಿಯಾಗಿ ಸಂಘಟಿಸುವಲ್ಲಿ ತುಂಬು ಕಾಳಜಿಯಿಂದ ಶ್ರಮಿಸಿದರು. ಭರತ್ ಶೆಟ್ಟಿಯವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಹಕ್ಕೋತ್ತಾಯದ ಮನವಿಯನ್ನು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿಗೆ ಒಪ್ಪಿಸಲಾಯಿತು. ಮುಖ್ಯ ಮಂತ್ರಿಗಳು ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
Kshetra Samachara
31/10/2021 10:52 pm