ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ತಹಶೀಲ್ದಾರ್ ಜಾನ್ ಪ್ರಕಾಶ್ ಗೆ ಬಡ್ತಿ: ಕೃಷಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಯಾಗಿ ವರ್ಗಾವಣೆ

ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಅವರಿಗೆ ಮುಂಬಡ್ತಿ ನೀಡಿರುವ ರಾಜ್ಯ ಸರಕಾರ, ಕೃಷಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಯಾಗಿ ವರ್ಗಾವಣೆಗೊಳಿಸಿದೆ.

ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ಸರಕಾರದ ಅಧೀನ ಕಾರ್ಯದರ್ಶಿ ವೃಂದದ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಸೇವೆಗಳು ಮತ್ತು ಸಮನ್ವಯ ವಿಭಾಗದ ಕಾರ್ಯದರ್ಶಿಯಾಗಿ ನಿಯುಕ್ತಿಗೊಳಿಸಿ ಆದೇಶಿಸಿದೆ‌.

ಕಡಬ ನಾಡಕಚೇರಿ ವಿಶೇಷ ತಹಶೀಲ್ದಾರ್ ಆಗಿ ರಾಜ್ಯ ಸರಕಾರದ ಸಚಿವಾಲಯದಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಾನ್ ಪ್ರಕಾಶ್ 2017 ಮಾ.13ರಂದು ಕರ್ತವ್ಯಕ್ಕೆ ಹಾಜರಾಗಿದ್ದರು.

ಇವರು ಬೆಂಗಳೂರು ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಯಾಗಿದ್ದ ಕೋಡಿಂಬಾಳ ಗ್ರಾಮದ ಮಾಲೇಶ್ವರ ದಿ.ಜಾನ್ ಎಸ್. ರೋಡ್ರಿಗಸ್ ಹಾಗೂ ಮೇರಿ ಡಿಸೋಜ ದಂಪತಿ ಪುತ್ರ.

ತೆರವಾದ ಕಡಬ ತಹಶೀಲ್ದಾರ್ ಸ್ಥಾನಕ್ಕೆಅನಂತ್ ಶಂಕರ್ ಅವರನ್ನು ನಿಯುಕ್ತಿಗೊಳಿಸಿ ಸರಕಾರ ಆದೇಶಿಸಿದೆ.

Edited By :
Kshetra Samachara

Kshetra Samachara

22/09/2020 08:45 pm

Cinque Terre

4.35 K

Cinque Terre

0

ಸಂಬಂಧಿತ ಸುದ್ದಿ