ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ಲೇಡಿಹಿಲ್ ವೃತ್ತ ಹೆಸರು ಬದಲಾವಣೆ ಹಿಂದೆ ಷಡ್ಯಂತ್ರ '

ಮಂಗಳೂರು: ಇಲ್ಲಿನ ಲೇಡಿಹಿಲ್ ವೃತ್ತ ನವೀಕರಿಸಿ, ವೃತ್ತಕ್ಕೆ ಇದೀಗ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡುವ ಬಗ್ಗೆಗಿನ ವಿಷಯ ನಮ್ಮ ಗಮನಕ್ಕೆ ಬಂದಿದ್ದು, ಈ ವಿಚಾರಕ್ಕೆ ಸಂಬಂಧಿಸಿ ನಮ್ಮ ವಿರೋಧವಿದೆ ಎಂದು ಎಸ್‌ಡಿಪಿಐ ತಿಳಿಸಿದೆ.

ಲೇಡಿಹಿಲ್ ವೃತ್ತಕ್ಕೆ ಚಾರಿತ್ರಿಕ ಮಹತ್ವವಿದೆ. ಮದರ್ ಜನರಲ್ ಮಾರಿ ದೇನ್ ಆಂಜ್ ಮಂಗಳೂರಿಗೆ ಬಂದಾಗ ಲೇಡಿಹಿಲ್ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಬ್ಯಾಸ ಮಾಡಲು ವಿದ್ಯಾಸಂಸ್ಥೆ ತೆರೆಯಬೇಕೆಂದು ಸ್ಥಳೀಯ ಸಾರ್ವಜನಿಕರು ಒತ್ತಾಯಿಸಿದ ಸಂದರ್ಭ ಗುಡ್ಡ ಪ್ರದೇಶವಾಗಿದ್ದ ಸ್ಥಳದಲ್ಲಿ ಸಾರ್ವಜನಿಕರ ಒತ್ತಾಯದಂತೆ ಹೆಣ್ಣು ಮಕ್ಕಳ ಶಾಲೆ ತೆರೆಯಲಾಯಿತು. ಈ ಗೌರವಾರ್ಥ ಅಲ್ಲಿಗೆ 'ಲೇಡಿಹಿಲ್'' ಹೆಸರು ಬಂದಿದೆ.

ಹೆಣ್ಣು ಮಕ್ಕಳ ಕಲಿಕೆಯ ಪ್ರತೀಕ, ಸಾಕ್ಷರತೆ ಕೇಂದ್ರ ಬಿಂದುವಾದ ಈ ಹೆಸರನ್ನು ಬದಲಾಯಿಸುವುದು ಅವರ ಗೌರವಕ್ಕೆ ಕೊಡುವ ಅಪಚಾರ ಎಂದು ತಿಳಿಸಿದೆ.

ಈಗಾಗಲೇ ನಮ್ಮ ಪಕ್ಷದ ಇಬ್ಬರು ಕಾರ್ಪೊರೇಟರ್‌ಗಳಾದ ಮುನೀಬ್ ಬೆಂಗ್ರೆ ಮತ್ತು ಶಂಶಾದ್ ಅಬೂಬಕ್ಕರ್ ಈ ವಿಚಾರದಲ್ಲಿ ಆಕ್ಷೇಪ ವ್ಯಕ್ತಪಡಿಸಿ ಮನಪಾ ಆಯುಕ್ತರಿಗೆ ಮತ್ತು ಮಹಾ ಪೌರರಿಗೆ ಆಕ್ಷೇಪ ಪತ್ರ ನೀಡಿದ್ದಾರೆ.

ಆದ್ದರಿಂದ ಲೇಡಿಹಿಲ್ ನಲ್ಲಿರುವ ವೃತ್ತವನ್ನು "ಲೇಡಿಹಿಲ್ ವೃತ್ತ’’ ಎಂದೇ ಮುಂದುವರಿಸಬೇಕು ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಆಗ್ರಹಿಸಿದ್ದಾರೆ.

Edited By :
Kshetra Samachara

Kshetra Samachara

25/09/2020 09:30 pm

Cinque Terre

10.77 K

Cinque Terre

3

ಸಂಬಂಧಿತ ಸುದ್ದಿ