ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಮಿನಿ ವಿಧಾನಸೌಧ ಆವರಣ ಖಾಸಗಿ ವಾಹನಗಳ ಪಾರ್ಕಿಂಗ್ ತಾಣ!; ತಹಸೀಲ್ದಾರ್ ತರಾಟೆ

ಬಂಟ್ವಾಳ: "ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ" ಎನ್ನುವ ಸೂಚನಾ ಫಲಕ ಪ್ರವೇಶ ದ್ವಾರದ ಬಳಿಯೇ ಇದ್ದರೂ ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಆವರಣ ಖಾಸಗಿ ವಾಹನಗಳ ಅಡ್ಡೆಯಾಗಿ ಮಾರ್ಪಟ್ಟಿದೆ!

ಮಿನಿ ವಿಧಾನಸೌಧ ಆವರಣ ಬಿ.ಸಿ.ರೋಡಿನ ಮಿನಿ ಪಾರ್ಕಿಂಗ್ ಏರಿಯಾ ಆಗಿ ಮಾರ್ಪಟ್ಟಿದ್ದು, ಖಾಸಗಿ ವಾಹನಗಳು ತುಂಬಿ ಹೋಗಿದೆ. ಖಾಸಗಿ ಕಾರು, ಬೈಕ್ ಗಳು ಮಾತ್ರವಲ್ಲದೆ, ಆಟೋ ರಿಕ್ಷಾಗಳು ಕೂಡ ಮಿನಿವಿಧಾನ ಸೌಧದ ಆವರಣದಲ್ಲಿ ನಿಲ್ಲಲಾರಂಭಿಸಿದೆ.

ಮಿನಿ ವಿಧಾನ ಸೌಧ ಆವರಣದಲ್ಲಿ ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್ ನಿಂದಾಗಿ ಸ್ವತಃ ತಹಸೀಲ್ದಾರ್ ಅವರ ಜೀಪನ್ನು ಆವರಣದ ಒಳ ತರಲು ಪರದಾಡಬೇಕಾಯಿತು.

ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿದವರನ್ನು ತಹಸೀಲ್ದಾರ್ ರಶ್ಮಿ ಎಸ್.ಆರ್.ತರಾಟೆಗೆ ತೆಗೆದುಕೊಂಡರಲ್ಲದೆ, ವಾಹನಗಳನ್ನು ತೆರವುಗೊಳಿಸಲು ಸ್ಥಳದಲ್ಲಿದ್ದ ಪೊಲೀಸರಿಗೆ ಸೂಚಿಸಿದರು. ಬಿ.ಸಿ.ರೋಡಿನಲ್ಲಿ ಪಾರ್ಕಿಂಗ್ ಸಮಸ್ಯೆ ಹಲವು ವರ್ಷಗಳ ಸಮಸ್ಯೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಿನಿವಿಧಾನ ಸೌಧದ ಆವರಣವೂ ಪಾರ್ಕಿಂಗ್ ಸ್ಥಳವಾಗಿ ಗುರುತಿಸಿ ಕೊಳ್ಳುತ್ತಿದೆ!.

Edited By :
Kshetra Samachara

Kshetra Samachara

23/09/2020 05:08 pm

Cinque Terre

22.1 K

Cinque Terre

0

ಸಂಬಂಧಿತ ಸುದ್ದಿ