ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದೇಶದ್ರೋಹಿಗಳನ್ನು ಶೀಘ್ರ ಬಂಧಿಸಿ; ಡಿವೈಎಫ್‌ಐ

ಮಂಗಳೂರು: ಕದ್ರಿ ಪೊಲೀಸ್ ಠಾಣೆ ಸಮೀಪದ ಕಂಪೌಂಡ್ ಗೋಡೆಯೊಂದರಲ್ಲಿ‌ ಲಷ್ಕರ್ ತೋಯ್ಬಾ, ತಾಲಿಬಾನ್ ಪರ ಘೋಷಣೆ ಬರೆದಿರುವ ಘಟನೆ ಮಂಗಳೂರಿನ ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ವಿವಿಧ ರೀತಿಯ ವದಂತಿ ಜನರ ನಡುವೆ ಹರಿದಾಡುತ್ತಿದೆ. ಇಂತಹ ಹೀನ ಕೃತ್ಯ ಎಸಗಿರುವ ತಪ್ಪಿತಸ್ಥರನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಡಿವೈಎಫ್ಐ ಜಿಲ್ಲಾ ನಿಯೋಗ ಮಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮನವಿ ಮಾಡಿದೆ.‌

ದ.ಕ‌. ಜಿಲ್ಲೆಯಲ್ಲಿ ಸಣ್ಣಪುಟ್ಟ ಘಟನೆಗಳು, ವದಂತಿ, ದೊಡ್ಡ ರೀತಿಯ ಗಲಭೆ, ಹಿಂಸಾಚಾರಗಳಿಗೆ ಕಾರಣವಾಗಿರುವ ವಿದ್ಯಮಾನ ಈ ಹಿಂದೆ ಹಲವು ಬಾರಿ ನಡೆದಿವೆ. ಕೋಮು ಸೂಕ್ಷ್ಮ ನಗರದಲ್ಲಿ ಇಂತಹ ಕೃತ್ಯ ಯಾವುದೇ ಅವಘಡಗಳಿಗೆ ಹೇತು ಆಗಬಹುದು. ಈ ಗೋಡೆ ಬರಹದ ಹಿಂದೆಯೂ ಸಮುದಾಯಗಳ ನಡುವಿನ ಅಪನಂಬಿಕೆ ಹೆಚ್ಚಿಸುವ, ಪರಸ್ಪರರನ್ನು ಎತ್ತಿಕಟ್ಟುವ ಉದ್ದೇಶ ಇದ್ದಂತಿದೆ. ನಗರದ ಮಧ್ಯ ಭಾಗದಲ್ಲಿ, ಪೊಲೀಸ್ ಠಾಣೆ ಬಳಿಯೇ ಇಂತಹ ಘಟನೆ ನಡೆದಿರುವುದು ಆತಂಕ ಹೆಚ್ಚಿಸಿದೆ.

ಪೊಲೀಸ್ ಇಲಾಖೆ ತಕ್ಷಣ ಈ ಕೃತ್ಯ ಎಸಗಿರುವ ತಪ್ಪಿತಸ್ಥರನ್ನು ಬಂಧಿಸಬೇಕು, ಘಟನೆಯ ಹಿಂದಿರುವ ಹುನ್ನಾರ ಬಯಲಿಗೆಳೆಯಬೇಕು, ಜನರ ಆತಂಕ ದೂರ ಮಾಡಬೇಕು ಎಂದು ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರಿಗೆ ಮನವಿ ಮಾಡಿದೆ. ನಿಯೋಗದಲ್ಲಿ ಡಿವೈಎಫ್ಐ ಮುಖಂಡರಾದ ಸಂತೋಷ್ ಬಜಾಲ್, ನಿತಿನ್ ಕುತ್ತಾರ್, ಸಾದಿಕ್ ಕಣ್ಣೂರು, ಅಶ್ರಫ್ ಹರೇಕಳ, ಮನೋಜ್ ಉರ್ವಸ್ಟೋರ್, ನಿತಿನ್ ಬಂಗೇರ ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

27/11/2020 07:24 pm

Cinque Terre

3.55 K

Cinque Terre

0

ಸಂಬಂಧಿತ ಸುದ್ದಿ