ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಆಸ್ತಿ ಅಡವಿಟ್ಟು ಪಚ್ಚನಾಡಿ ತ್ಯಾಜ್ಯ ದುರಂತದ ಸಂತ್ರಸ್ತರಿಗೆ ಪರಿಹಾರ ನೀಡಿ- ಮನಪಾಗೆ ಹೈಕೋರ್ಟ್‌ ನಿರ್ದೇಶನ

ಮಂಗಳೂರು: ಕಳೆದ ವರ್ಷ ನಡೆದ ಪಚ್ಚನಾಡಿ ಘನತ್ಯಾಜ್ಯ ಘಟಕ ದುರಂತದ ಸಂತ್ರಸ್ತರಿಗೆ ಆಸ್ತಿ ಅಡವಿಟ್ಟು ಪರಿಹಾರ ನೀಡುವಂತೆ ಮಂಗಳೂರು ನಗರ ಪಾಲಿಕೆಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರವು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿತ್ತು. ಇದು ಅಕ್ಟೋಬರ್ 14ರ ಬುಧವಾರ ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಪಾಲಿಕೆಯ ಪರ ವಕೀಲರು 'ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಲು ಹಣದ ಕೊರತೆ ಇದೆ. ಪರಿಹಾರಕ್ಕಾಗಿ 14 ಕೋಟಿ ರೂ.ಗಳನ್ನು ಸರ್ಕಾರವು ಈವರೆಗೆ ಬಿಡುಗಡೆ ಮಾಡಿಲ್ಲ' ಎಂದು ನ್ಯಾಯಪೀಠದ ಮುಂದೆ ವಿವರಿಸಿದರು.

ಈ ವೇಳೆ ನ್ಯಾಯಪೀಠ 'ಪಾಲಿಕೆಯ ಕಟ್ಟಡ ಅಥವಾ ಸ್ಥಿರಾಸ್ತಿಯನ್ನು ಅಡವಿಟ್ಟು ಪರಿಹಾರವನ್ನು ನೀಡುವಂತೆ ಮೌಖಿಕವಾಗಿ ಪಾಲಿಕೆಗೆ ತಿಳಿಸಿದೆ. ಸಂತ್ರಸ್ತರಲ್ಲಿ ಕೇವಲ 35 ಮಂದಿಗೆ ಈವರೆಗೆ ಬೆಳೆ ನಷ್ಟ ಪರಿಹಾರವನ್ನು ಮಾತ್ರ ವಿತರಿಸಲಾಗಿದೆ. ಮನೆಹಾನಿಗೆ ಯಾವುದೇ ಪರಿಹಾರವನ್ನು ನೀಡಿಲ್ಲ ಎಂದು ಹೈಕೋರ್ಟ್‌ ತಿಳಿಸಿದೆ.

Edited By : Vijay Kumar
Kshetra Samachara

Kshetra Samachara

15/10/2020 05:35 pm

Cinque Terre

2.73 K

Cinque Terre

0

ಸಂಬಂಧಿತ ಸುದ್ದಿ