ಬಂಟ್ವಾಳ: ಗ್ರಾಮವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯವರ್ಧಕ ಸಂಘ ಪುತ್ತೂರು ಹಾಗೂ ಸಹಕಾರ ಭಾರತಿ ದ.ಕ.ಜಿಲ್ಲೆ ಸಹಯೋಗದಲ್ಲಿ ನಡೆಯುವ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಬಿ.ಸಿ.ರೋಡಿನ ಗೀತಾಂಜಲಿ ಸಭಾಭವನದಲ್ಲಿ ಸೋಮವಾರ ಉದ್ಘಾಟನೆಗೊಂಡಿತು.
ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ನ ಪ್ರಿನ್ಸಿಪಾಲ್ ಗೋಪಿನಾಥ್ ಶೆಟ್ಟಿ ಶಿಬಿರ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ನೀಡುವ ಒಂದು ವರ್ಷದ ಕೋರ್ಸ್ ಗಳ ಗುಣಮಟ್ಟವನ್ನೇ ಈ ಶಿಬಿರದ ತರಬೇತಿಯಲ್ಲೂ ನೀಡಲಾಗುತ್ತದೆ ಎಂದರು.
ಸಹಕಾರ ಭಾರತಿ ಜಿಲ್ಲಾ ಕಾರ್ಯದರ್ಶಿ ಶ್ರೀಕೃಷ್ಣ ಕೊಂಪಪದವು ಹಾಗೂ ಗ್ರಾಮ ವಿಕಾಸ ಸಮಿತಿ ಸಂಯೋಜಕ ಜಿತೇಂದ್ರ ಪ್ರತಾಪನಗರ ಮಂಜೇಶ್ವರ ಶುಭಹಾರೈಸಿದರು. ಆರ್.ಎಸ್.ಎಸ್ ಪುತ್ತೂರು ಜಿಲ್ಲಾ ಕಾರ್ಯವಾಹ ವಿನೋದ್ಕುಮಾರ್ ಕೊಡ್ಮಾಣ್, ಗ್ರಾಮವಿಕಾಸ ಸಮಿತಿ ಮಂಗಳೂರು ವಿಭಾಗದ ಸಂಯೋಜಕ ವೆಂಕಟ್ರಮಣ ಹೊಳ್ಳ ಉಪಸ್ಥಿತರಿದ್ದರು. ಆರ್ಎಸ್ಎಸ್ ತಾಲೂಕು ಸೇವಾಪ್ರಮುಖ್ ಮನಮೋಹನ್ ನೈನಾಡ್ ಸ್ವಾಗತಿಸಿದರು. ಹರೀಶ್ ಕಾಡಬೆಟ್ಟು ವಂದಿಸಿದರು. ಶಿಬಿರದ ಸಂಚಾಲಕ ದಾಮೋದರ್ ನೆತ್ತರಕೆರೆ ಕಾರ್ಯಕ್ರಮ ನಿರ್ವಹಿಸಿದರು.
Kshetra Samachara
05/10/2020 04:12 pm