ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಬೆಟ್ಟು:ಕಾಂಕ್ರೀಟಿಕರಣ ಲೋಕಾರ್ಪಣೆ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ

ಹೊಸಬೆಟ್ಟು:70.80 ಲಕ್ಷ ರೂಪಾಯಿ ಅನುದಾನದಲ್ಲಿ ಇಡ್ಯಾ ಪಶ್ಚಿಮ ವಾರ್ಡ್ 7 ರ ಹೊಸಬೆಟ್ಟು ಚಿತ್ರಾಪುರ ರಸ್ತೆಯ ಕಾಂಕ್ರೀಟಿಕರಣ ಲೋಕಾರ್ಪಣೆ ಮತ್ತು ತಾವರೆಕೊಳ ರಾಜಕಾಲುವೆಯ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕರಾದ ಡಾ.ಭರತ್ ಶೆಟ್ಟಿಯವರು ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭ ಪಾಲಿಕೆ ಸ್ಥಳೀಯ ಸದಸ್ಯೆ ನಯನ ಆರ್ ಕೋಟ್ಯಾನ್, ಮಂಡಲ ಉಪಾಧ್ಯಕ್ಷ ವಿಠ್ಠಲ್ ಸಾಲ್ಯಾನ್, ಕಾರ್ಯದರ್ಶಿ ರಾಘವೇಂದ್ರ ಶೆಣೈ, ಮಹಾ ಶಕ್ತಿಕೇಂದ್ರ ಕಾರ್ಯದರ್ಶಿ ಸುನಿಲ್ ಕುಳಾಯಿ, ಬಿಜೆಪಿ ಪ್ರಮುಖರಾದ ಪ್ರಮೀಳಾ ಕೊಟ್ಯಾನ್, ಯೋಗೀಶ್ ಸನಿಲ್ ಸ್ಥಳೀಯ ಹಿರಿಯ ನಾಗರಿಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

08/04/2022 03:29 pm

Cinque Terre

908

Cinque Terre

0

ಸಂಬಂಧಿತ ಸುದ್ದಿ