ಪುನರೂರು: ನೆಲಕ್ಕುರುಳುವ ಸ್ಥಿತಿಯಲ್ಲಿ ವಿದ್ಯುತ್ ಕಂಬ; ಆತಂಕದಲ್ಲಿ ಗ್ರಾಮಸ್ಥರು

ಮುಲ್ಕಿ: ಕಿನ್ನಿಗೋಳಿ- ಮುಲ್ಕಿ ರಾಜ್ಯ ಹೆದ್ದಾರಿಯ ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ ಪುನರೂರು ಶಾಲೆ ಸಮೀಪದ ಸುಣ್ಣದ ಬೂಡು ರಸ್ತೆಯ ಬಳಿ ವಿದ್ಯುತ್ ಕಂಬವೊಂದು ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದ್ದು, ಕೂಡಲೇ ಸ್ಥಳಾಂತರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿದ್ಯುತ್ ಕಂಬದ ಮೇಲ್ಭಾಗ ಮುರಿದ ಸ್ಥಿತಿಯಲ್ಲಿದ್ದು, ಬದಿಯಲ್ಲಿ ಹೈವೋಲ್ಟೇಜ್ ಟ್ರಾನ್ಸ್ ಫಾರ್ಮರ್ ನ ತಂತಿಗಳ ಆಧಾರದಲ್ಲಷ್ಟೇ ನಿಂತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಿನ್ನಿಗೋಳಿ- ಮುಲ್ಕಿ ರಾಜ್ಯ ಹೆದ್ದಾರಿಯಲ್ಲಿ ನಿಮಿಷಕ್ಕೊಂದರಂತೆ ವಾಹನಗಳು ಸಂಚರಿಸುತ್ತಿದ್ದು, ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ಓಡಾಡುತ್ತಿರುತ್ತಾರೆ. ಆದ್ದರಿಂದ ಕೂಡಲೇ ಅಪಾಯಕಾರಿಯಾದ ಈ ವಿದ್ಯುತ್ ಕಂಬವನ್ನು ತೆರವುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಬಗ್ಗೆ ಕಿನ್ನಿಗೋಳಿ ಮೆಸ್ಕಾಂ ಅಧಿಕಾರಿ ಚಂದ್ರಹಾಸ್ ಅವರನ್ನು ಸಂಪರ್ಕಿಸಿದಾಗ, ಕಿನ್ನಿಗೋಳಿ- ಮುಲ್ಕಿ ರಾಜ್ಯ ಹೆದ್ದಾರಿ ಬದಿಯಲ್ಲಿರುವ ವಿದ್ಯುತ್ ಕಂಬ ಅಪಾಯದಲ್ಲಿ ರುವುದು ಗಮನಕ್ಕೆ ಬಂದಿದ್ದು, ಕೂಡಲೇ ತೆರವುಗೊಳಿಸಲಾಗುವುದು ಎಂದರು.

Kshetra Samachara

Kshetra Samachara

25 days ago

Cinque Terre

7.4 K

Cinque Terre

0