ಚೇಳೈರು: "ಗುರುಹಿರಿಯರ ಮೇಲಿನ ಗೌರವಾದರ ನಮ್ಮ ಪ್ರಗತಿಗೆ ಸೋಪಾನ"

ಮುಲ್ಕಿ: ಕಲಿಕಾಸಕ್ತಿ ಮತ್ತು ಗುರುಹಿರಿಯರ ಮೇಲಿನ ಗೌರವಾದ ಹಣರ ಸಮಾಜದಲ್ಲಿ ನಮ್ಮನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸಿ, ಪ್ರಗತಿ ಪಥದತ್ತ ಕೊಂಡೊಯ್ಯುತ್ತವೆ ಎಂದು ಚೇಳೈರು ಗ್ರಾಪಂ ಮಾಜಿ ಅಧ್ಯಕ್ಷ ಜಯಾನಂದ ಚೇಳೈರು ಹೇಳಿದರು.

ಅವರು ಚೇಳೈರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳೂರು ವಿವಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಮಂಗಳ ಗಂಗೋತ್ರಿ ವತಿಯಿಂದ ನಡೆದ 'ಗುರು ನಡೆ ಗ್ರಾಮದೆಡೆ' ಕಾರ್ಯ ಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಚೇಳೈರು ಗ್ರಾಪಂ ಅಧ್ಯಕ್ಷೆ ಯಶೋದಾ ಉದ್ಘಾಟಿಸಿದರು. ಪ್ರಿನ್ಸಿಪಾಲ್ ಜಯಾನಂದ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಚೇಳೈರು ಗ್ರಾಪಂ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೆಂಕಟೇಶ ಶೆಟ್ಟಿ,ಮಂಗಳೂರು ವಿಶ್ವವಿದ್ಯಾಲಯ ಬ್ರಹ್ಮ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಂಚಾಲಕ, ಜಾನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಉಪಸ್ಥಿತರಿದ್ದರು.

Kshetra Samachara

Kshetra Samachara

10 days ago

Cinque Terre

2.13 K

Cinque Terre

0