ಮುಲ್ಕಿ:ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಮುಲ್ಕಿ, ಶ್ರೀ ದುರ್ಗಾ ಶಕ್ತಿ ಮಹಿಳಾ ಮಂಡಳಿ ಬೆಳ್ಳಾಯರು ಕೆರೆಕಾಡು, ಸ್ತ್ರೀಶಕ್ತಿ ಗುಂಪು ಬೆಳ್ಳಾಯರು ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಿರಿಯ ಪ್ರಾಥಮಿಕ ಶಾಲೆ ಕೆರೆಕಾಡು ಇಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಾರ್ತಿಕ್ ಎಸ್ ಕಟೀಲು ಮತ್ತು ತಂಡದವರಿಂದ (ಸ್ವರಕ್ಷ ) ಕಾರ್ಯಾಗಾರ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮುಲ್ಕಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಪ್ರತಿಭಾ ವೆಂಕಟೇಶ ಹೆಬ್ಬಾರ್ ವಹಿಸಿದ್ದರು. ಮುಲ್ಕಿ ಲಯನ್ಸ್ ಕ್ಲಬ್ ಉಪಾಧ್ಯಕ್ಷರು ಗ್ರಾ. ಪಂ. ಮಾಜೀ ಅಧ್ಯಕ್ಷರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯಲಕ್ಷ್ಮಿ, ಮತ್ತು ಪವಿತ್ರ, ಮತ್ತು ಮಹಿಳಾ ಮಂಡಳಿ ಅಧ್ಯಕ್ಷರಾದ ಗಾಯತ್ರಿ ಉಪಸ್ಥಿತರಿದ್ದರು. ಸಂಘದ ಸದಸ್ಯರಾದ ಭಾಗ್ಯಜ್ಯೋತಿ ಸ್ವಾಗತಿಸಿ , ರೇಖಾ ಧನ್ಯವಾದ ವಿತ್ತು ತಿಲೋತ್ತಮ ಕಾರ್ಯಕ್ರಮ ನಿರೂಪಿಸಿದರು.
Kshetra Samachara
01/03/2021 05:45 pm