ಮುಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಂದಿನಿ ನದಿ ಜನಿಸಿದ ದಿನವಾದ ಮಾಘ ಶುದ್ಧ ಪೌರ್ಣಮಿಯ ವಿಶೇಷ ದಿನವನ್ನು ಶನಿವಾರ ದೇವರಿಗೆ ಸೀಯಾಳಾಭಿಷೇಕ, ಕ್ಷೀರಾಭಿಷೇಕ, ಹಾಲು- ಪಾಯಸ ಸೇವೆಯ ಮೂಲಕ ಆಚರಿಸಲಾಯಿತು.
ವಿದ್ವಾನ್ ಎಂ. ನಾರಾಯಣ ಸುರತ್ಕಲ್ ಬಳಗದವರು ಕಟೀಲು ಭ್ರಮರಾಂಬೆಯ ಕುರಿತಾದ ಭಕ್ತಿಗೀತೆಗಳನ್ನು ಹಾಡಿ ಸಂಗೀತಾರ್ಚನೆ ನಡೆಸಿದರು.
Kshetra Samachara
28/02/2021 10:32 am