ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಣೆಮಂಗಳೂರಿನಲ್ಲಿ ತಾಲೂಕು ಮಟ್ಟದ ಸಂಪೂರ್ಣ ಸುರಕ್ಷಾ ವಿಮಾ ನೊಂದಾವಣೆ ಕಾರ್ಯಕ್ರಮ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ), ಪಾಣೆಮಂಗಳೂರು ವಲಯದಲ್ಲಿ ತಾಲೂಕು ಮಟ್ಟದ 2021-22 ರ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮಾ ನೋಂದಾವಣೆ ಕಾರ್ಯಕ್ರಮವನ್ನು ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಯೋಜನೆಯು ಯಾವಾಗಲೂ ಜನಪರ ಕಾರ್ಯಕ್ರಮಗಳನ್ನು ನೀಡುತ್ತಿದ್ದು ಅದರಲ್ಲಿ ಸಂಪೂರ್ಣ ಸುರಕ್ಷಾ ವಿಮೆ ಕೂಡ ಒಂದು ಎಂದು ಹೇಳಿದರು. ದೇಶದ ಆರ್ಥಿಕತೆಗೆ ಆರೋಗ್ಯವಂತ ಗ್ರಾಮೀಣ ಸಮಾಜದ ಜನ ಸಂಪನ್ಮೂಲದ ಕೊಡುಗೆ ದೊಡ್ಡದು, ಸಾಮಾನ್ಯ ಜನರ ಆರೋಗ್ಯ ರಕ್ಷಣೆಗಾಗಿ ಆಯ್ದ ಆಸ್ಪತ್ರೆಗಳಲ್ಲಿ ಅಪಘಾತ ಮತ್ತು ಅನಾರೋಗ್ಯದ ಚಿಕಿತ್ಸೆಗಾಗಿ ಸಕಾಲದಲ್ಲಿ ನಗದು ರಹಿತ ಸೌಲಭ್ಯ ಒದಗಿಸುವುದು ಈ ವಿಮೆಯ ಉದ್ದೇಶ ಎಂದು ತಿಳಿಸಿದರು. ವೇದಿಕೆಯಲ್ಲಿ ಪಾಣೆಮಂಗಳೂರು ವಲಯ ಅಧ್ಯಕ್ಷ ವಾಮನ, ತಾಲೂಕು ಯೋಜನಾಧಿಕಾರಿ ಜಯಾನಂದ ಪಿ., ಶಂಭೂರು ಒಕ್ಕೂಟ ಅಧ್ಯಕ್ಷೆ ಹೇಮಲತಾ, ಒಕ್ಕೂಟ ಸದಸ್ಯರು ಭಾಗವಹಿಸಿದ್ದರು, ವಲಯ ಮೇಲ್ವಿಚಾರಕಿ ಅಮಿತ ಸ್ವಾಗತಿಸಿ ಸೇವಾ ಪ್ರತಿನಿಧಿ ಲಕ್ಷ್ಮೀ ಧನ್ಯವಾದವಿತ್ತರು.

Edited By : Nirmala Aralikatti
Kshetra Samachara

Kshetra Samachara

17/02/2021 05:53 pm

Cinque Terre

13.27 K

Cinque Terre

0

ಸಂಬಂಧಿತ ಸುದ್ದಿ