ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದ.ಕ. ಜಿಲ್ಲಾಧಿಕಾರಿ ಮೇಜಿಗೂ ಬಂತು ತುಳು ಲಿಪಿ ನಾಮಫಲಕ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಲಿಪಿ ಟ್ರೆಂಡ್ ಆರಂಭವಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೂ ತುಳು ಲಿಪಿಯ ನಾಮಫಲಕ ಅಳವಡಿಕೆಯಾಗಿದೆ.

'ಯುವ ತುಳುನಾಡ್ ® ಕುಡ್ಲ' ಸಂಘಟನೆಯು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ತುಳುಲಿಪಿ ನಾಮಫಲಕ ಹಸ್ತಾಂತರಿಸಿದೆ. ಈ ಮೂಲಕ ಇಂದಿನಿಂದ ಜಿಲ್ಲಾಧಿಕಾರಿಯವರು ತಮ್ಮ ಟೇಬಲ್ ನಲ್ಲಿ ತುಳು ಲಿಪಿಯಲ್ಲಿ ನಾಮಫಲಕ ಬಳಸಿದ್ದಾರೆ.

ಇತ್ತೀಚೆಗೆ ಇದೇ ಸಂಘಟನೆಯು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್ ಅವರಿಗೆ ತುಳು ಲಿಪಿಯ ನಾಮಫಲಕ ನೀಡಲಾಗಿತ್ತು. ಅಲ್ಲದೆ, ಜಿಲ್ಲೆಯ ಶಾಸಕರು, ಸಂಸದರಿಗೂ ತುಳು ಲಿಪಿ ನಾಮಫಲಕ ನೀಡಿತ್ತು.

ಜಿಲ್ಲಾಧಿಕಾರಿಯವರಿಗೆ 'ಯುವ ತುಳುನಾಡ್ ® ಕುಡ್ಲ' ಸಂಘಟನೆಯ ಪ್ರ.ಕಾರ್ಯದರ್ಶಿ ರಿತೇಶ್ ಡಿಸೋಜ, ಪ್ರಧಾನ ಸಂಘಟನೆ ಸಲಹೆಗಾರ ದಿಲ್​ರಾಜ್ ಆಳ್ವ, ಸದಸ್ಯ ಆಸ್ಟಿನ್ ಸುಶೀಲ್ ಅವರು ತುಳು ಲಿಪಿಯ ನಾಮಫಲಕ ಹಸ್ತಾಂತರಿಸಿದರು.

Edited By : Nirmala Aralikatti
Kshetra Samachara

Kshetra Samachara

08/02/2021 06:21 pm

Cinque Terre

4.2 K

Cinque Terre

0

ಸಂಬಂಧಿತ ಸುದ್ದಿ