ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು ವಿವಿ ತುಳು ಎಂಎ ಪದವೀಧರರಿಗೆ ಶೀಘ್ರ ಪಿಎಚ್ ಡಿ ಅಧ್ಯಯನ ವ್ಯವಸ್ಥೆ ಪ್ರಾರಂಭಿಸಲಿ: ಕತ್ತಲ್‍ಸಾರ್ ಕರೆ

ಮಂಗಳೂರು: ಮಂಗಳೂರು ವಿವಿ ಪ್ರಥಮ ತುಳು ಎಂಎ ತಂಡ ಯಶಸ್ವಿಯಾಗಿ ಪೂರೈಸಿ ಹೊರಬಂದಿದ್ದು, ತುಳು ಚಳುವಳಿ ಇನ್ನೂ ಮುಂದುವರಿಯಲು ತುಳು ಎಂಎ ಪದವೀಧರರಿಗೆ ವಿವಿ ಕೂಡಲೇ ಪಿ.ಎಚ್.ಡಿ ಅಧ್ಯಯನಕ್ಕೆ ಅವಕಾಶ ನೀಡಬೇಕೆಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್ ಒತ್ತಾಯಿಸಿದರು.

ಸಂಧ್ಯಾ ಕಾಲೇಜಿನಲ್ಲಿ ನಡೆದ ತುಳು ವಿಭಾಗದ ವಿದ್ಯಾರ್ಥಿಗಳ ಸಮಾಗಮದಲ್ಲಿ ಆಗಮನ ನಿರ್ಗಮನ ವಿದ್ಯಾರ್ಥಿಗಳನ್ನು “ಎದ್ಕೊನುನ-ಒಚ್ಚಿದ್‍ಕೊರ್ಪುನ” ಕಾರ್ಯಕ್ರಮದ ವೇದಿಕೆಯಿಂದ ಮುಖ್ಯ ಅತಿಥಿಯಾಗಿ ಮಾತನಾಡಿ, ದೃಢ ನಿಲುವಿನಿಂದ ತುಳು ಸ್ನಾತಕೋತ್ತರ ಅಧ್ಯಯನ ಕೇಂದ್ರ ಪ್ರಾರಂಭವಾಗಿದೆ. ಇದೀಗ ಪದವೀಧರರಿಗೆ ಪಿಎಚ್ ಡಿ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ತುಳು ವಿಭಾಗದ ಪರಿಪೂರ್ಣ ರಚನೆಯಾಗಬೇಕಾದರೆ ಎಲ್ಲಾ ಮೂಲ ಸೌಲಭ್ಯ ಒದಗಿಬರಬೇಕು. ತುಳು ಸಾಹಿತ್ಯ ಅಕಾಡೆಮಿ ಎಲ್ಲಾ ಬಗೆಯಲ್ಲೂ ಮಾತೃ ಸ್ವರೂಪದಲ್ಲಿರುವುದರಿಂದ ತುಳು ಭಾಷೆಗೆ ಸಂಬಂಧಿಸಿದ ನೀತಿ ನಿರ್ಧಾರಗಳಲ್ಲಿ ಹಾಗೂ ಪಠ್ಯದ ರಚನೆಯಲ್ಲಿ ಸಂಬಂಧಿಸಿದವರು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅಂತೆಯೇ ವಿಭಾಗಕ್ಕೆ ನಡೆಯುವ ಉಪನ್ಯಾಸಕರ ನೇಮಕಾತಿಗಳಲ್ಲಿ ತುಳು ಎಂಎ ಅರ್ಹತೆ ಇರುವವರನ್ನು ಹಾಗೂ ತುಳು ಮಾತೃಭಾಷೆ ಆಡುವವರನ್ನು ಮಾತ್ರ ಪರಿಗಣಿಸಬೇಕೆಂದು ಸಲಹೆ ನೀಡಿದರು‌.

ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ.ಸುಭಾಷಿಣಿ ಶ್ರೀವತ್ಸ, ಕೊಂಕಣಿ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕ ದೇವದಾಸ ಪೈ, ಡಾ.ಸಾಯಿಗೀತಾ, ಜ್ಞಾನೇಶ್ವರಿ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

23/01/2021 09:03 am

Cinque Terre

5.11 K

Cinque Terre

0

ಸಂಬಂಧಿತ ಸುದ್ದಿ