ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ಪೊಲೀಸರ ಜೊತೆಗೆ ಲಾಠೀವಾಲಾನಿಂದ ವಾಹನ ತಡೆದು ತಪಾಸಣೆ!; ಯಾರೀತ? ಸಾರ್ವಜನಿಕರ ಪ್ರಶ್ನೆ, ಆಕ್ರೋಶ

ಕಡಬ: ವಾಹನಗಳನ್ನು ತಪಾಸಣೆ ನಡೆಸಿ ದಂಡ ವಸೂಲಿ ಮಾಡುವುದು ಪೊಲೀಸರ ಕೆಲಸ. ಆದರೆ, ಇಲ್ಲೊಬ್ಬ ಪೊಲೀಸ್ ಇಲಾಖೆಗೆ ಸಂಬಂಧ ಪಡದ ಖಾಸಗಿ ವ್ಯಕ್ತಿ ವಾಹನಗಳನ್ನು ಲಾಠಿ ಬೀಸಿ ಅಡ್ಡಗಟ್ಟಿ ನಿಲ್ಲಿಸುತ್ತಿದ್ದು, ವಾಹನ ಸವಾರರಲ್ಲಿ ಹಲವು ಅನುಮಾನ, ಸಂಶಯಕ್ಕೆ ಕಾರಣವಾಗಿದೆ.

ಜ. 20ರಂದು ಸಂಜೆ ಕಡಬ ತಾಲೂಕಿನ ಮರ್ದಾಳ ಸಮೀಪ ಕರ್ಮಾಯಿ ಕ್ರಾಸ್ ನಲ್ಲಿ ಪೊಲೀಸರ ಟ್ರಾಫಿಕ್ ವಾಹನ ಇರುವಾಗಲೇ ಲಾಠಿ ಹಿಡಿದು ವಾಹನಗಳನ್ನು ಅಡ್ಡಗಟ್ಟುವ ವೀಡಿಯೊ ಎಲ್ಲೆಡೆ ಹರಿದಾಡುತ್ತಿದ್ದು, ಪೊಲೀಸ್ ಇಲಾಖೆಗೆ ಮುಜುಗರ ಉಂಟಾಗುವಂತಾಗಿದೆ.

ಈತ ಡ್ರೈವರ್ ಲೋಕೇಶ್ ಎಂದು ಹೇಳಲಾಗುತ್ತಿದೆ. ಪೊಲೀಸ್ ಇಲಾಖೆಯ ಸಿಬ್ಬಂದಿಯಂತೆ ವಾಹನ ಸವಾರರೊಂದಿಗೆ ವರ್ತಿಸುವ ಈತನ ನಡೆಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಎದ್ದಿದೆ.

ಕಡಬ ಠಾಣೆಯನ್ನು ಮಾದರಿ ಠಾಣೆಯನ್ನಾಗಿ ಮಾಡಲು ಶ್ರಮಿಸುತ್ತಿರುವ ಎಸ್ಐ ರುಕ್ಮ ನಾಯ್ಕ್ ಅವರ ಪ್ರಯತ್ನಕ್ಕೆ ಈ ಘಟನೆ ಮಸಿ ಬಳಿದಂತಾಗಿದೆ. ವಿಶೇಷವೆಂದರೆ ಎಸ್ಐಯವರು ತರಬೇತಿ ಹಿನ್ನೆಲೆಯಲ್ಲಿ ಠಾಣೆ ವ್ಯಾಪ್ತಿಯಿಂದ ಹೊರಗಿದ್ದು, ಸಿಬ್ಬಂದಿ ಬೇಜವಾಬ್ದಾರಿಯಿಂದ ಈ ಸನ್ನಿವೇಶ ನಿರ್ಮಾಣವಾಗಿದೆ.

Edited By : Nirmala Aralikatti
Kshetra Samachara

Kshetra Samachara

20/01/2021 08:06 pm

Cinque Terre

13.04 K

Cinque Terre

0

ಸಂಬಂಧಿತ ಸುದ್ದಿ