ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಉಪನೋಂದಣಿ ಕಚೇರಿಗೆ 10 ಲಕ್ಷ ರೂ. ಅನುದಾನ ಬಿಡುಗಡೆ; ಬಹುಕಾಲದ ಸಮಸ್ಯೆಗೆ ಮುಕ್ತಿ

ಮಂಗಳೂರು: ಮಂಗಳೂರು ತಾಲೂಕು ಉಪನೋಂದಣಿ ಕಚೇರಿಗೆ ಹೆಚ್ಚುವರಿ ಕಂಪ್ಯೂಟರ್ ಹಾಗೂ ಆಪರೇಟರ್ ವ್ಯವಸ್ಥೆಗೆ 10 ಲಕ್ಷ ರೂ‌. ಅನುದಾನವನ್ನು ಕಂದಾಯ ಇಲಾಖೆ ಬಿಡುಗಡೆಗೊಳಿಸಿದೆ.

ಈ ನಿಟ್ಟಿನಲ್ಲಿ ಸಾರ್ವಜನಿಕರ ಬಹುಕಾಲದ ಸಮಸ್ಯೆಗೆ ಮುಕ್ತಿ ದೊರಕಿದಂತಾಗಿದೆ.

ಕೆಲವು ದಿನಗಳ ಹಿಂದೆ ಮಂಗಳೂರು ತಾಲೂಕು ಉಪನೋಂದಣಿ ಕಚೇರಿಯಲ್ಲಿನ ಅವ್ಯವಸ್ಥೆ ಕುರಿತು ಸಾರ್ವಜನಿಕ ವಲಯದಿಂದ ದೂರುಗಳು ಬಂದಿತ್ತು‌. ಈ ಹಿನ್ನೆಲೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಡಾ. ಭರತ್ ಶೆಟ್ಟಿ ದಿಢೀರ್ ಭೇಟಿ ನೀಡಿದ್ದರು.

ಈ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರ ಕಚೇರಿಯಲ್ಲಿ ನಿನ್ನೆ ಸಭೆ ನಡೆದಿತ್ತು. ಮಂಗಳೂರು ತಾಲೂಕು ಉಪನೋಂದಣಿ ಕಚೇರಿಯಲ್ಲಿ ಕಂಪ್ಯೂಟರ್ ಹಾಗೂ ಆಪರೇಟರ್ ವ್ಯವಸ್ಥೆಗಳಿಗೆ ಸ್ಥಳದ ಅಭಾವವಿದ್ದು, ಉಪನೋಂದಣಿ ಕಚೇರಿಯ ಕೊಠಡಿ ಸಂಖ್ಯೆ 8 ಹಾಗೂ 9ರ ನಡುವಿನ ಗೋಡೆಯನ್ನು ಕೆಡವಿ ಸ್ಥಳಾವಕಾಶ ಒದಗಿಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಇಂದು ದ.ಕ. ಜಿಲ್ಲಾಧಿಕಾರಿಗಳಿಗೆ ಕೋರಿದೆ. ಅಲ್ಲದೆ, 10 ಲಕ್ಷ ರೂ‌. ಅನುದಾನವನ್ನು ಕಂದಾಯ ಇಲಾಖೆ ಬಿಡುಗಡೆಗೊಳಿಸಿದೆ.

Edited By : Nirmala Aralikatti
Kshetra Samachara

Kshetra Samachara

19/01/2021 08:58 pm

Cinque Terre

6.34 K

Cinque Terre

0

ಸಂಬಂಧಿತ ಸುದ್ದಿ