ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗ ಜ. 14ರಿಂದ ಮಂಗಳೂರು- ಉಡುಪಿ- ಮಂತ್ರಾಲಯ ನಾನ್ ಎಸಿ ಸ್ಲೀಪರ್ ಬಸ್ ಸೌಲಭ್ಯ ಆರಂಭಿಸಲಿದೆ.
ಈ ಬಸ್ ಮಂಗಳೂರಿನಿಂದ ಸಂಜೆ 3.30ಕ್ಕೆ ಹೊರಟು ಉಡುಪಿ-ಕುಂದಾಪುರ-ಹಾಲಾಡಿ-ಸಿದ್ಧಾಪುರ- ಮಾಸ್ತಿಕಟ್ಟೆ- ತೀರ್ಥಹಳ್ಳಿ-ಶಿವಮೊಗ್ಗ- ಚೆನ್ನಗಿರಿ -ಹೊಳಲ್ಕರೆ-ಚಿತ್ರದುರ್ಗ-ಚಳ್ಳೆಕೆರೆ-ರಾಂಪುರ-ಬಳ್ಳಾರಿ-ಅಲೂರು-ಅದೋನಿ-ಮಾಧವರಂ ಮಾರ್ಗವಾಗಿ ಮಂತ್ರಾಲಯಕ್ಕೆ ಬೆಳಗ್ಗೆ 6.20ಕ್ಕೆ ತಲುಪಲಿದೆ. ಬಳಿಕ ಮಂತ್ರಾಲಯದಿಂದ ಮರು ಪ್ರಯಾಣ ಸಂಜೆ 5.30ಕ್ಕೆ ಹೊರಟು ಮಂಗಳೂರಿಗೆ ಬೆಳಗ್ಗೆ 8.40ಕ್ಕೆ ತಲುಪಲಿದೆ.
ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ಸೌಲಭ್ಯವಿದ್ದು, ಸಾರ್ವಜನಿಕರು ಈ ಸಾರಿಗೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರಾರಸಾ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
Kshetra Samachara
11/01/2021 05:11 pm