ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಪಡಿ ಸಂಸ್ಥೆಯಿಂದ ಮಕ್ಕಳ ರಕ್ಷಣೆ- ಶಿಕ್ಷಣ, ಕೋವಿಡ್-19 ಜಾಗೃತಿ ಅಭಿಯಾನ

ಪುತ್ತೂರು: ಪಡಿ ಸಂಸ್ಥೆ ಆಯೋಜಿಸಿದ ಪುತ್ತೂರು ತಾಲೂಕು ಮಟ್ಟದ ಮಕ್ಕಳ ರಕ್ಷಣೆ ಮತ್ತು ಶಿಕ್ಷಣ ಹಾಗೂ ಕೋವಿಡ್-19 ಕುರಿತು ಜಾಗೃತಿ ಅಭಿಯಾನವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು.

ಈ ಸಂದರ್ಭ ಪಡಿ ಸಂಸ್ಥೆ ಹೊರ ತಂದಿರುವ ಮಕ್ಕಳ ರಕ್ಷಣೆ ಮತ್ತು ಶಿಕ್ಷಣ ಹಾಗೂ ಕೋವಿಡ್-19 ಕುರಿತು ಜಾಗೃತಿ ಬರಹಗಳಿರುವ ಕ್ಯಾಲೆಂಡರ್ ನ್ನು ಶಾಸಕರು ಬಿಡುಗಡೆ ಗೊಳಿಸಿದರು.

ಪುತ್ತೂರು ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುತ್ತೂರು ಸರಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಫೀಕ್, ಸಂಸ್ಥೆ ಸದಸ್ಯರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

09/01/2021 12:31 pm

Cinque Terre

4.27 K

Cinque Terre

0

ಸಂಬಂಧಿತ ಸುದ್ದಿ