ಮುಲ್ಕಿ: ಕಾರ್ಪೊರೇಟರ್ ಅನುದಾನದ 9.85 ಲಕ್ಷ ರೂ.ವೆಚ್ಚದಲ್ಲಿ ಪಾಲಿಕೆ 4ನೇ ವಾರ್ಡ್ ನಲ್ಲಿ ಕಾಂಕ್ರಟೀಕರಣಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭ 7ನೇ ಬ್ಲಾಕ್ ನಲ್ಲಿ ಎಸ್ ಎಫ್ ಸಿ ಅನುದಾನದಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರಿಟೀಕರಣಗೊಂಡ ರಸ್ತೆ ಉದ್ಘಾಟಿಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕರಾವಳಿ ಶಾಸಕರ ಜತೆ ಮುಖ್ಯಮಂತ್ರಿ ಪ್ರತ್ಯೇಕ ಸಭೆ ನಡೆಸಿ ಆಗಬೇಕಾದ ಅಗತ್ಯ ಮೂಲಸೌಕರ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಅನುದಾನ ಬಿಡುಗಡೆ,ಪ್ರತ್ಯೇಕ ಮರಳು ನೀತಿ,ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆಗೆ ಅನುದಾನ ಬಿಡುಗಡೆಯ ಭರವಸೆ ದೊರಕಿದೆ.
ಕರಾವಳಿಯ ಶಾಸಕರು ಶಿಸ್ತುಬದ್ಧವಾಗಿ ಸರಕಾರದ ಜತೆಗಿದ್ದೇವೆ.ನಮಗೆ ಅಭಿವೃದ್ಧಿಗೆ ಹಣ ನೀಡಿ ಎಂಬುದಷ್ಟೇ ಮನವಿಯಾಗಿತ್ತು ಎಂದು ಸ್ಪಷ್ಟ ಪಡಿಸಿದರು.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ,ಸ್ಥಳೀಯ ಕಾರ್ಪೊರೇಟರ್ ಲಕ್ಷ್ಮೀ ಶೇಖರ್ ದೇವಾಡಿಗ, ಲೋಕೇಶ್ ಬೊಳ್ಳಾಜೆ ಶೇಖರ್ ದೇವಾಡಿಗ,ಬಾಬು ಪೂಜಾರಿ,ಪ್ರಶಾಂತ್ ಆಚಾರ್ಯ,ಚಂದ್ರಯ್ಯ ಆಚಾರಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
07/01/2021 09:00 am