ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಮಳೆ ನೀರು ನಿಂತ ಪರಿಣಾಮ; ರಾಜ್ಯ ಹೆದ್ದಾರಿಯಲ್ಲಿ ಕೃತಕ ಕೆರೆ ನಿರ್ಮಾಣ

ಕೈಕಂಬದಿಂದ ಬಜಪೆಗೆ ಸಾಗುವಂತಹ ರಾಜ್ಯ ಹೆದ್ದಾರಿಯ ಸುಂಕದಕಟ್ಟೆಯ ರಿಕ್ಷಾ ಪಾರ್ಕ್ ನ ಬಳಿ ರಾಜ್ಯ ಹೆದ್ದಾರಿಯಲ್ಲಿಯೇ ಮಳೆ ನೀರು ನಿಂತ ಪರಿಣಾಮ ಕೃತಕ ಕೆರೆ ನಿರ್ಮಾಣವಾದಂತಾಗಿದೆ. ಇದ್ರಿಂದ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಗಿದೆ.

ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ, ಸಂಬಂಧಪಟ್ಟ ಕಂದಾವರ ಗ್ರಾಮ ಪಂಚಾಯತ್ ಗೆ ಮಾಹಿತಿಯನ್ನು ನೀಡಿದ್ದರೂ, ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಮಳೆಗಾಲದ ಸಂದರ್ಭ ಮಾತ್ರ ಈ ಸಮಸ್ಯೆ ಶಾಶ್ವತ ಸಮಸ್ಯೆಯಂತಾಗಿದೆ.

ಈ ಸ್ಥಳದಲ್ಲಿ ಈ ಹಿಂದೆ ಕೂಡ ಕೆಲವು ಅವಘಡಗಳು ಸಂಭವಿಸಿತ್ತು. ಅಲ್ಲದೆ ಅನತಿ ದೂರದಲ್ಲಿ ಶಾಲೆ ಕೂಡ ಇದೆ.ಮುಖ್ಯವಾಗಿ ಶಾಲಾ ಮಕ್ಕಳು ರಸ್ತೆಯಲ್ಲಿ ನಡೆದುಕೊಂಡು ಹೋಗಲು ಅಸಾಧ್ಯವಾಗಿದೆ. ರಸ್ತೆಯಂಚಿನಲ್ಲಿನ ಅಸಮರ್ಪಕ ಸ್ಥಿತಿಯಲ್ಲಿನ ಚರಂಡಿ ವ್ಯವಸ್ಥೆಯಿಂದಾಗಿ ಮಳೆ ನೀರು ಚರಂಡಿಯಲ್ಲಿ ಹರಿದು ಹೊಗದೇ ರಸ್ತೆಯಲ್ಲಿಯೇ ಸಂಗ್ರಹವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಕಂದಾವರ ಗ್ರಾಮ ಪಂಚಾಯತ್ ರಸ್ತೆಯಂಚಿನಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Edited By :
Kshetra Samachara

Kshetra Samachara

11/06/2022 12:05 pm

Cinque Terre

6.7 K

Cinque Terre

0

ಸಂಬಂಧಿತ ಸುದ್ದಿ