ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು-ದೇರಳಕಟ್ಟೆ-ಎರ್ನಾಕುಲಂ ಕ್ಲಬ್ ಕ್ಲಾಸ್ ವೋಲ್ವೋ ಬಸ್ ಪ್ರಾರಂಭ

ಮಂಗಳೂರು: ಮಂಗಳೂರು ಬಸ್‌ ನಿಲ್ದಾಣದಿಂದ ದೇರಳಕಟ್ಟೆ ಮಾರ್ಗವಾಗಿ ಎರ್ನಾಕುಲಂಗೆ ಹೋಗುವ ವೋಲ್ವೋ ವಾಹನವನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಡಿಸೆಂಬರ್ 18ರಿಂದ ಆರಂಭಿಸಲಾಗುವುದು ಎಂದು ಕ.ರಾ.ರ.ಸಾ.ಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆ ತಿಳಿಸಿದ್ದಾರೆ.

ಮಾರ್ಗದ ಸಾರಿಗೆ ಕಾರ್ಯಾಚರಣೆಯ ವಿವರ:

ಕ್ಲಬ್ ಕ್ಲಾಸ್ ವೋಲ್ವೋ ಮಂಗಳೂರಿನಿಂದ ರಾತ್ರಿ 9 ಗಂಟೆಗೆ ಹೊರಟು 9:25ಕ್ಕೆ ದೇರಳಕಟ್ಟೆ ಮಾರ್ಗವಾಗಿ ಎರ್ನಾಕುಲಂಗೆ ಬೆಳಿಗ್ಗೆ 5 ಗಂಟೆಗೆ ತಲುಪಲಿದೆ. (ವಯಾ ಕಾಸರಗೋಡು, ಕ್ಯಾಲಿಕಟ್, ತ್ರಿಶ್ಯೂರ್, ಅಳಪೆ), ಎರ್ನಾಕುಲಂ ನಿಂದ ರಾತ್ರಿ 8:30ಕ್ಕೆ ಹೊರಟು ಬೆಳಗ್ಗೆ 5:35ಕ್ಕೆ ಮಂಗಳೂರು ತಲುಪಲಿದೆ.

ಪ್ರಯಾಣಿಕರು ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. ಅಥವಾ ಹತ್ತಿರದ ರಿಸರ್ವೇಶನ್ ಕೌಂಟರ್ ಸಂಪರ್ಕಿಸಬಹುದಾಗಿದೆ ಎಂದು ಮಂಗಳೂರು ಕರಾರಸಾಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

20/12/2020 09:42 pm

Cinque Terre

4.11 K

Cinque Terre

0

ಸಂಬಂಧಿತ ಸುದ್ದಿ