ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ನಾಡು: ಡಾ.ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ

ಮುಲ್ಕಿ: ಅಂಬೇಡ್ಕರ್ ಯುವ ಸೇನೆ ಕೆರೆಕಾಡು ಗ್ರಾಮ ಶಾಖೆ ವತಿಯಿಂದ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ಕಾರ್ನಾಡು ಅಮೃತಾನಂದಮಯಿ ನಗರದ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು.

ಈ ಸಂದರ್ಭ ಕಾಪು ತಾಲೂಕು ಅಂಬೇಡ್ಕರ್ ಯುವಸೇನೆ ಅಧ್ಯಕ್ಷ ಲೋಕೇಶ್ ಪಡುಬಿದ್ರಿ ಮಾತನಾಡಿ, ಭಾರತದ ಸಂವಿಧಾನ ಕರ್ತರಾದ ಅಂಬೇಡ್ಕರ್ ಅವರ ತತ್ವಾದರ್ಶ ಪಾಲಿಸಿಕೊಂಡು ಸಂಘಟನೆಯ ಸದಸ್ಯರು ನೂತನ ಸಮಾಜ ನಿರ್ಮಿಸುವಲ್ಲಿ ಶ್ರಮಿಸಬೇಕು ಎಂದರು.

ಕೆರೆಕಾಡು ಅಂಬೇಡ್ಕರ್ ಯುವ ಸೇನೆ ಅಧ್ಯಕ್ಷ ಉಮೇಶ್ ಕೆರೆಕಾಡು, ಮಹಿಳಾಧ್ಯಕ್ಷೆ ಚಂದ್ರಿಕಾ ಬೆಳ್ಳಾಯರು, ಶ್ರೀಪತಿ ಕೆರೆಕಾಡು, ನವೀನ ಬೊಲ್ಲರ್, ವಾಮನ,ಸುದರ್ಶನ ಅಂಗರಗುಡ್ಡೆ, ಪ್ರತಾಪ್ ಬೆಳ್ಳಾಯರು, ಪೂರ್ಣಿಮಾ ಕೆರೆಕಾಡು, ಯುವಸೇನೆ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

08/12/2020 01:47 pm

Cinque Terre

2.59 K

Cinque Terre

0

ಸಂಬಂಧಿತ ಸುದ್ದಿ