ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನ ಮಾರ್ಗದರ್ಶನದಲ್ಲಿ ಭಾರತ ಸರಕಾರ
ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು, ಪಡುಪಣಂಬೂರು ಗ್ರಾಪಂ ತೋಕೂರು ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಯುವಕ ಸಂಘ, ಮಹಿಳಾ ಮಂಡಲ ತೋಕೂರು, ಫೇಮಸ್ ಯೂತ್ ಕ್ಲಬ್ ತೋಕೂರು, ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ,ಗಜಾನನ ಸ್ಪೋರ್ಟ್ಸ್ ಕ್ಲಬ್ ತೋಕೂರು,ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು,ಯುವಕ ಮಂಡಲ ಕಲ್ಲಾಪು ಸಂಸ್ಥೆ ಆಶ್ರಯದಲ್ಲಿ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನದ ಷಷ್ಠಿ ಮಹೋತ್ಸವದ ಪೂರ್ವಭಾವಿಯಾಗಿ ರಥೋತ್ಸವ ಗದ್ದೆಯಲ್ಲಿ ಹಾಗೂ ದೇವಸ್ಥಾನದ ಸುತ್ತಮುತ್ತ ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭ ತೋಕೂರು ದೇವಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರಿದಾಸ್ ಭಟ್ ಮಾತನಾಡಿ, ಸಂಘಟನೆಗಳು ಸಂಘಟಿತರಾಗಿ ಸ್ವಚ್ಛತೆ ಮೂಲಕ ದೇವಳದ ಅಭಿವೃದ್ಧಿಗೆ ಕೈ ಜೋಡಿಸುತ್ತಿರುವುದು ಶ್ಲಾಘನೀಯ. ಕೊರೊನಾ ವಿರುದ್ಧ ಎಚ್ಚರಿಕೆ ವಹಿಸಿ ಸರಕಾರದ ನಿಯಮ ಪಾಲಿಸೋಣ ಎಂದರು.
ಸ್ವಚ್ಛತಾ ಕಾರ್ಯಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಭಾಗವಹಿಸಿ ಯಶಸ್ವಿಗೊಳಿಸಿದರು.
Kshetra Samachara
01/12/2020 06:13 pm