ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಗವತಿ ಪ್ರೇಮ್ ಡೆಜ್ಜರ ಅಪಾಯ : ತಜ್ಞರಿಂದ ವರದಿ ಸಲ್ಲಿಕೆ

ಮಂಗಳೂರು : ಗುಡ್ಡೆಕೊಪ್ಲ ಬೀಚ್ ನಲ್ಲಿರುವ ಭಗವತಿ ಪ್ರೇಮ್ ಡೆಜ್ಜರನ್ನು ಶೀಘ್ರ ತೆರವುಗೊಳಿಸುವಂತೆ ಮಂಗಳೂರು ಮೀನುಗಾರಿಕಾ ಕಾಲೇಜಿನ ಡೀನ್ ಡಾ.ಎ.ಸೆಂಥಿಲ್ವೇಲ್ ನೇತೃತ್ವದ ತಜ್ಞರ ತಂಡ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಗೆ ಅಧ್ಯಯನ ವರದಿ ಸಲ್ಲಿಸಿದೆ.

ಹಡಗು 60 ಮೀಟರ್ ಉದ್ದವಿದ್ದು ಬೀಚ್ ಗೆ ಅಡ್ಡಲಾಗಿ ನಿಂತಿದೆ. ಇದರಿಂದ ಮೀನುಗಾರಿಕೆಗೂ ತೊಂದರೆಯಾಗಿದೆ.

ಈಗಾಗಲೇ ಹಡಗಿನ ಸುತ್ತ ಮರಳು ಆವರಿಸಿದ್ದು, ಮತ್ತಷ್ಟು ಕಾಲ ಇದ್ದರೆ ಅದನ್ನು ತೆರವುಗೊಳಿಸಲು ಡ್ರೆಜ್ಜಿಂಗ್ ಮಾಡಬೇಕಾಗುತ್ತದೆ.

ಹಡಗಿನಲ್ಲಿ ಬೃಹತ್ ಪ್ರಮಾಣದಲ್ಲಿರುವ ಡೀಸೆಲ್ ಮತ್ತು ಆಯಿಲ್ ಪ್ರಸ್ತುತ ಸೋರಿಕೆಯಾಗುತ್ತಿಲ್ಲ.

ಸೋರಿಕೆ ಸಾಧ್ಯತೆಯೂ ಇದೆ. ಆದ್ದರಿಂದ ಅದನ್ನು ಸುರಕ್ಷಿತವಾಗಿ ತೆರವುಗೊಳಿಸಬೇಕು.

ಎಂದು ಹಡಗು ಇರುವ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿ ಸಿದ್ಧಪಡಿಸಿರುವ ವರದಿಯಲ್ಲಿ ಮನವಿ ಮಾಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

29/11/2020 03:24 pm

Cinque Terre

3.14 K

Cinque Terre

0

ಸಂಬಂಧಿತ ಸುದ್ದಿ