ಮಂಗಳೂರು: ಉಪ್ಪಿನಂಗಡಿ ಹೆದ್ದಾರಿ ದುರಸ್ತಿ ಕಾಮಗಾರಿ ನಿಧಾನಗೊಂಡಿರುವುದು ಸ್ಥಳೀಯರು ಹಾಗೂ ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಬಿ.ಸಿ.ರೋಡ್-ಅಡ್ಡಹೊಳೆ ಹೆದ್ದಾರಿ ಮರು ಟೆಂಡರ್ ಪ್ರಕ್ರಿಯೆ ನಿಧಾನಗೊಂಡಿದೆ. ಇತ್ತ ಕಿತ್ತು ಹೋದ ರಸ್ತೆಯಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಹೆದ್ದಾರಿ ರಿಪೇರಿ/ನಿರ್ವಹಣೆಗೆ ಒಂಬತ್ತು ತಿಂಗಳ ಟೆಂಡರ್ ಅಂತಿಮಗೊಂಡು ಕೆಲಸ ಶುರು ಮಾಡಿದ್ದರೂ, ಗುತ್ತಿಗೆದಾರರು ಕೆಲಸಕ್ಕೆ ವೇಗ ನೀಡಿಲ್ಲ. ಕೆಲವು ಕಡೆ ಮಾಡಲಾದ ಡಾಂಬರು ತೇಪೆ ಇತ್ತೀಚಿನ ಮಳೆಗೆ ಮತ್ತೆ ಕಿತ್ತುಹೋಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ದರಸ್ತಿ ಕಾಮಗಾರಿ ವಿಳಂಬದಿಂದಾಗಿ ಬೆಂಗಳೂರು-ಮಂಗಳೂರು ಮಧ್ಯೆ ಸಂಚರಿಸುವವರು ಖಾಸಗಿ, ಕೆಎಸ್‌ಆರ್‌ಟಿಸಿ ಬಸ್ ಚಾಲಕರು, ಪ್ರಯಾಣಿಕರು ಹೆದ್ದಾರಿ ಪ್ರಾಧಿಕಾರಕ್ಕೆ ಶಾಪ ಹಾಕುತ್ತಿದ್ದಾರೆ.
Kshetra Samachara
27/11/2020 04:42 pm