ಮುಲ್ಕಿ: ಕಿನ್ನಿಗೋಳಿ ಸಮೀಪದ ಮೆನ್ನಬೆಟ್ಟು ಪಂಚಾಯತ್ ಸಹಭಾಗಿತ್ವದಲ್ಲಿ ಜಲಜೀವನ ಮಿಷನ್ ಜಿಪಂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಜಿಪಂ ಹಾಗೂ ಮಂಗಳೂರು ತಾಪಂ ಸಹಯೋಗದೊಂದಿಗೆ ಯೋಜನೆ ಅನುಷ್ಠಾನ ಬೆಂಬಲ ಸಂಸ್ಥೆ ಸಮುದಾಯ ತುಮಕೂರು ವತಿಯಿಂದ ಜಲಜೀವನ್ ಮಿಷನ್ ನ ಶಿಕ್ಷಣ ಮಾಹಿತಿ ಸಂಪರ್ಕ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮ ವಿಭಾಗದ ಜಲಜೀವನ್ ಕಾರ್ಯ ಚಟುವಟಿಕೆಗಳಾದ ಸ್ವಸಹಾಯ ಸಂಘಗಳ ಜಾಥಾ ಮತ್ತು ವಿಶೇಷ ಗ್ರಾಮ ಸಭೆ ಮೆನ್ನಬೆಟ್ಟು ಗ್ರಾಪಂ ನಲ್ಲಿ ನಡೆಯಿತು.
ಜಿಲ್ಲಾ ಜಲಜೀವನ್ ಐಇಸಿ ಹೆಚ್ ಆರ್ ಡಿ ವಿಭಾಗದ ಮುಖ್ಯಸ್ಥ ಶಿವರಾಮ್ ಪಿ.ಬಿ. ಜಲ ಸಂರಕ್ಷಣೆ ಹಾಗೂ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದರು. ಪಿಡಿಒ ಡಾ.ರಮ್ಯ ಕೆ.ಎಸ್., ಜಲಜೀವನ್ ಮಿಷನ್ ಜಿಲ್ಲಾ ಐಇಸಿ ಅಧಿಕಾರಿ ಮಹಂತೇಶ್ ಹಿರೇಮಠ್ ಹಾಗೂ ಪಂ. ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ, ಶಿಕ್ಷಣ, ಆರೋಗ್ಯ,ಕೃಷಿ,ಅರಣ್ಯಇಲಾಖೆ ಮತ್ತು ಮೆನ್ನಬೆಟ್ಟು ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
04/11/2020 09:26 pm