ಉಳ್ಳಾಲ: ಸ್ವಸಹಾಯ ಸಂಘಗಳ ಸದಸ್ಯರಿಗೆ ಸಾಮರ್ಥ್ಯಾಭಿವೃದ್ಧಿ ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ತರಬೇತಿ ಮತ್ತು ಆತ್ಮ ನಿರ್ಭರ್ ಸ್ವನಿಧಿ ಮಾಹಿತಿ ಕಾರ್ಯಕ್ರಮ ಸೋಮೇಶ್ವರ ಪುರಸಭೆ ಸಭಾಂಗಣದಲ್ಲಿ ನಡೆಯಿತು.
ಇದೇ ಸಂದರ್ಭ 19 ಮಂದಿ ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ವಿತರಿಸಲಾಯಿತು. ನಾಲ್ಕು ಮಂದಿ ಸ್ವಸಹಾಯ ಗುಂಪಿನ ಸದಸ್ಯರಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ನೀಡಲಾಯಿತು.
ಮುಖ್ಯಾಧಿಕಾರಿ ವಾಣಿ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದ.ಕ. ಜಿಲ್ಲಾ ಡೇ ನಲ್ಮ್ ಯೋಜನೆ ಅಭಿಯಾನದ ವ್ಯವಸ್ಥಾಪಕ ಐರಿನ್ ರೆಬೆಲ್ಲೊ ಮತ್ತು ವಿಶ್ವನಾಥ್ ರಾವ್ ತರಬೇತಿ ನೀಡಿದರು.
ಸಂಘಟಕರಾದ ರೋಹಿನಾಥ್, ರೂಪ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
22/10/2020 10:00 am