ಬಂಟ್ವಾಳ: ಬಂಟ್ವಾಳ ಮತ್ತು ಉಳ್ಳಾಲ ತಾಲೂಕುಗಳ ಮಧ್ಯೆ ಇರಾ ಎಂಬಲ್ಲಿ ದೇಶದ ಎರಡನೇ ಹಾಗೂ ರಾಜ್ಯದ ಪ್ರಥಮ ಎನ್ನಲಾದ ಕತ್ತೆ ಸಾಕಾಣಿಕೆ ಮತ್ತು ಮಾದರಿ ತರಬೇತಿ ಕೇಂದ್ರ ಆರಂಭಗೊಳ್ಳಲಿದೆ.
ಐಸಿರಿ ಫಾಮ್ಸ್ ಅವರ ಮೂಲಕ ಸಮಗ್ರ ಕೃಷಿ ಮತ್ತು ಪಶು ಸಂಗೋಪನೆ, ಪಶು ವೈದ್ಯಕೀಯ ಸೇವೆಗಳು, ತರಬೇತಿ ಮತ್ತು ಮೇವು ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಕೇಂದ್ರ ಅನುಷ್ಠಾನಗೊಳ್ಳಲಿದೆ.
ರಾಮನಗರ ಮೂಲದ ಎಂಜಿನಿಯರ್ ಶ್ರೀನಿವಾಸ ಗೌಡ ಮಾಲೀಕತ್ವದಲ್ಲಿ ಕೇಂದ್ರ ಕಾರ್ಯಾಚರಿಸಲಿದೆ.ಇದು ಜೂನ್ 8 ರಂದು ಕಾರ್ಯಾರಂಭಗೊಳ್ಳಲಿದೆ. ಇಲ್ಲಿಂದ ಪೌಷ್ಟಿಕಾಂಶಯುಕ್ತ ಎನ್ನಲಾದ ಕತ್ತೆ ಹಾಲು ಉತ್ಪಾದನೆಯನ್ನೂ ಮಾಡಲಾಗುತ್ತದೆ.
ಕತ್ತೆ ಹಾಲು ಶ್ರೇಷ್ಠ ಪೌಷ್ಟಿಕಾಂಶವನ್ನು ಒಳಗೊಂಡಿರುವ ಜತೆಗೆ ಬಹಳ ದುಬಾರಿ. ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ ಕೇಂದ್ರದಲ್ಲಿ 20 ಕತ್ತೆಗಳಿವೆ.
PublicNext
06/06/2022 09:32 am