ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಯಕ್ಷಗಾನ ಗುರು, ಛಂದಸ ಕವಿ ಗಣೇಶ ಕೊಲೆಕಾಡಿಯವರ ಚಿಕಿತ್ಸೆಗೆ ನೆರವು ಬೇಕಿದೆ

ಮಂಗಳೂರು: ಯಕ್ಷಗಾನ ಕವಿ, ಯಕ್ಷಗಾನ ಗುರು, ಛಂದಸ ಕವಿ ಗಣೇಶ ಕೊಲೆಕಾಡಿಯವರ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದು, ಬಾಯಿಯ ಗಂಭೀರ ಕಾಯಿಲೆಯಿಂದ ಅವರು ಬಳಲುತ್ತಿದ್ದಾರೆ. ಇದೀಗ ನಗರದ ಮಂಗಳಾ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀರಾ ಆರ್ಥಿಕ ಸಂಕಷ್ಟದಲ್ಲಿರುವ ಅವರು ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಧ್ಯವಾಗದೆ ದಾನಿಗಳ ನೆರವು ಕೋರಿದ್ದಾರೆ.

ಯಕ್ಷಗಾನ ಕವಿಯಾಗಿ 60ಕ್ಕೂ ಅಧಿಕ ಪ್ರಸಂಗಗಳನ್ನು ರಚಿಸಿರುವ ಗಣೇಶ ಕೊಲೆಕಾಡಿಯವರು ಯಕ್ಷಗಾನ ಗುರುವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯಾದಾನ ಮಾಡಿದವರು. ಛಂದಃಶಾಸ್ತ್ರದ ಬಗ್ಗೆ ಹಲವಾರು ಸಂಶೋಧನೆಗಳನ್ನು, ತಾಲಗಳ ಬಗ್ಗೆಯೂ ಹಲವಾರು ಸಂಶೋಧನೆಗಳನ್ನು ಮಾಡಿದ್ದಾರೆ.

ಇಂಥಹ ಗಣೇಶ ಕೊಲೆಕಾಡಿಯವರು ಮುಂಬೈನಲ್ಲಿ ನಡೆದ ದುರ್ಘಟನೆಯೊಂದರಲ್ಲಿ ದುಷ್ಕರ್ಮಿಗಳ ದಾಳಿಗೊಳಗಾಗಿ ಎರಡೂ ಕಾಲು, ಎರಡೂ ಕೈ ಮುರಿತಕ್ಕೊಳಗಾಗಿ, ತಲೆಗೂ ಬಲವಾದ ಏಟು ಬಿದ್ದ ಪರಿಣಾಮ ಸುದೀರ್ಘ ಚಿಕಿತ್ಸೆಗೊಳಗಾಗಿದ್ದರು. ಅಲ್ಲಿಂದ ಇಲ್ಲಿಯವರೆಗೆ ಹಾಸಿಗೆಯಲ್ಲಿದ್ದೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವಿವಾಹಿತರಾದ ಇವರು ವೃದ್ಧೆ ತಾಯಿಯೊಂದಿಗೆ ಜೀವನ ಕಳೆಯುತ್ತಿದ್ದಾರೆ. ಇದೀಗ ಗಣೇಶ ಕೊಲೆಕಾಡಿಯವರು ವಿಪರೀತವಾದ ಬಾಯಿ ಸೋಂಕಿನಿಂದ ಮಾತನಾಡಲು, ಆಹಾರ ಸೇವಿಸಲು ಕಷ್ಟ ಪಡುತ್ತಿದ್ದಾರೆ ಪೂರ್ಣ ತೆರೆಯಲಾಗದ ಬಾಯಿ, ಒಳ ಸರಿದ ನಾಲಗೆಯ ದುಸ್ಥಿತಿಯ ನಡುವೆ ಸಹಿಸಲಾರದ ನೋವಿನಿಂದ ಬಳಲುತ್ತಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಅವರಿಗೆ ಶಸ್ತ್ರಚಿಕಿತ್ಸೆಯೊಂದು ನಡೆದಿದೆ. ಮೇ 17ರಂದು ಕುತ್ತಿಗೆ ಹಾಗೂ ನಾಲಿಗೆಯ ಎರಡನೇ ಶಸ್ತ್ರಚಿಕಿತ್ಸೆ ನಡೆದಿದೆ. ಇದಕ್ಕೂ ಮುನ್ನ ಒಂದು ತಿಂಗಳ ಕಾಲ ಸುರತ್ಕಲ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಹಿಂದೆ ಮಂಗಳಾ ಆಸ್ಪತ್ರೆಯಲ್ಲಿ ಅಂದಾಜು 1.50 ಲಕ್ಷ ರೂ. ಬಿಲ್ ಆಗಬಹುದು ಎಂದು ಹೇಳಿದ್ದರು. ಆದರೆ ಶಸ್ತ್ರಚಿಕಿತ್ಸೆ ವೆಚ್ಚ, ಆಸ್ಪತ್ರೆ ವೆಚ್ಚ ಸೇರಿ ಇದೀಗ ಲಕ್ಷಾಂತರ ರೂ. ಬಿಲ್ ಆಗುವ ಸಾಧ್ಯತೆಯಿದೆ. ಚಿಕಿತ್ಸಾ ವೆಚ್ಚ ಭರಿಸಲು ಸಹೃದಯಿ ದಾನಿಗಳು ನೆರವಾಗಬೇಕು ಎಂದು ಗಣೇಶ ಕೊಲೆಕಾಡಿಯವರು ವಿನಂತಿಸಿದ್ದಾರೆ.

ನೆರವು ನೀಡುವವರು

ಗೂಗಲ್ ಪೇ ನಂ. 9482130381

ಬ್ಯಾಂಕ್ ಖಾತೆ ವಿವರ:

ಹೆಸರು: ಗಣೇಶ್ ಸುವರ್ಣ ಕೊಲೆಕಾಡಿ

SB Account No 005310500055943

The Bharat Co operative Bank Ltd. MULKY Branch

IFSC Code No BCBM0000054.

Edited By :
PublicNext

PublicNext

19/05/2022 10:10 am

Cinque Terre

23.79 K

Cinque Terre

0

ಸಂಬಂಧಿತ ಸುದ್ದಿ