ಮುಲ್ಕಿ: ಮುಲ್ಕಿ ವಿಜಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ವಿವೇಕಾನಂದರ ಜನ್ಮದಿನದ ಉದ್ದೇಶ ಯುವ ಸಪ್ತಾಹ ಕಾರ್ಯಕ್ರಮವನ್ನು ಉಡುಪಿ ಅಜ್ಜರಕಾಡು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರಾಮದಾಸ್ ಪ್ರಭು ಉದ್ಘಾಟಿಸಿ ಮಾತನಾಡಿ ಸ್ವಾಮಿ ವಿವೇಕಾನಂದರ ತತ್ವ ಆದರ್ಶ, ಅದ್ಭುತ ಸಂದೇಶಗಳು ಇಂದಿಗೂ ಪ್ರಸ್ತುತ ಎಂದರು
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರಿಮಣಿ ಶೆಟ್ಟಿ ಮಾತನಾಡಿ ''ಸ್ವಾಮಿ ವಿವೇಕಾನಂದರ ತತ್ತ್ವಜ್ಞಾನ ಮತ್ತು ಅವರು ಬದುಕಿ ಬೋಧಿಸಿದ ಆದರ್ಶಗಳು ಭಾರತದ ಯುವಜನತೆಯ ದೊಡ್ಡ ಸಂಪನ್ಮೂಲ ಹಾಗೂ ಸ್ಫೂರ್ತಿಮೂಲವಾಗಿವೆ,''ಎಂದರು
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸಂಪತ್ ಕುಮಾರ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಜಿತೇಂದ್ರ ವಿ ರಾವ್, ಹಾಗೂ ಐ.ಕ್ಯೂ.ಐ.ಸಿ ಅಧಿಕಾರಿ ಪ್ರೋ. ಚನ್ನ ಪೂಜಾರಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಶ್ರೇಯ ಸ್ವಾಗತಿಸಿದರು, ಚಂದನ ವಂದಿಸಿದರು ಹಾಗೂ ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು.
Kshetra Samachara
12/01/2022 04:03 pm