ಮಂಗಳೂರು:ನಮ್ಮ ಊರಿನ ಯುವಕನೋರ್ವ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುದೆಂದರೆ ಅದೊಂದು ಹೆಮ್ಮೆ ವಿಷಯ ನಮ್ಮ ಕರಾವಳಿ ಇನ್ನಷ್ಟು ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಗುರುತಿಸುಕೊಳ್ಳುವಂತಾಗಲಿ ಎಂದು ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ಅವರು ಮಂಗಳೂರು ಜಾಗತಿಕ ಬಂಟರ ಸಂಘದ ಒಕ್ಕೂಟದ ಕಾರ್ಯಾಲಯದಲ್ಲಿ ಬಾಸ್ಕೆಟ್ ಬಾಲ್ ನ ಬಾರತ ತಂಡದ ಸದಸ್ಯನಾಗಿ ಉತ್ತಮ ಪ್ರದರ್ಶನ ನೀಡಿ ಇತ್ತೀಚೆಗೆ ಬಂಗಾರದ ಪದಕ ಗಳಿಸುವಲ್ಲಿ ಶ್ರಮ ವಹಿಸಿದ ಶಶಿಕಾಂತ್ ರೈ ಅವರನ್ನು ಸನ್ಮಾನಿಸಿ ಮಾತನಾಡಿದರು.
ಪ್ರತಿಭೆ ಎಂಬುದು ಎಲ್ಲರಲ್ಲಿಯೂ ಇದೆ ಅದನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಉತ್ತಮ ಸಾಧನೆ ಮಾಡಲು ಸಾದ್ಯ ಎಂದರು.
ಈ ಸಂದರ್ಭ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ, ಅವಿಕ್ಷಿತ್ ರೈ, ಹಾಗೂ ಕುಟುಂಬ ಸದಸ್ಯರು, ಪ್ರಬಂಧಕ ಸಚ್ವಿದಾನಂದ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
30/12/2021 10:02 am